ರೈತರಿಗೆ ಹೈನುಗಾರಿಕೆ ನಿರ್ವಾಹಣೆಯ ಮಾಹಿತಿ
ಚಿಂತಾಮಣಿ: ತಾಲೂಕಿನ ಚನ್ನಕೇಶವಪುರ ಗ್ರಾಮದಲ್ಲಿ ನಡೆದ ಸಮಗ್ರ ಹೈನುಗಾರಿಕೆ ನಿರ್ವಹಣೆ ಗುಂಪು ಚರ್ಚೆಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘ, ಚಿಂತಾಮಣಿಯ ಪಶುರೋಗ ತಜ್ಞ ಡಾ.ಎಲ್.ರಾಘವೇಂದ್ರ, ಉಪವ್ಯವಸ್ಥಾಪಕ ಡಾ:ಈಶ್ವರಯ್ಯ, ವಿಸ್ತರಣಾಧಿಕಾರಿ ನಾರಾಯಣಸ್ವಾಮಿ ಪಾಲ್ಗೊಂಡು ಸಮಗ್ರ ಹೈನುಗಾರಿಕೆ ನಿರ್ವಹಣೆ ಬಗ್ಗೆ ತಾಲೂಕಿನ ರೈತರಿಗೆ ತಿಳಿಸಿಕೊಟ್ಟರು.
ಡಾ.ಎಲ್.ರಾಘವೇಂದ್ರ ಮಾತನಾಡಡಿ, ಸಮಗ್ರ ಪಶುಗಳ ನಿರ್ವಹಣೆ, ಕರುಗಳ ನಿರ್ವಹಣೆ, ಪಶುಕರುಗಳ ಕೊಟ್ಟಿಗೆ ನಿರ್ವಹಣೆ, ಖನಿಜಗಳ ಮಿಶ್ರಣ, ಪಶುಗಳ ಪೀಡೆ ಮತ್ತು ಪಶುಗಳಿಗೆ ತಗಲುವ ರೋಗಗಳನ್ನು ತಡೆಯುವ ಹಾಗೂ ನಿರ್ವಹಣೆಯ ಬಗ್ಗೆ ರೈತರಿಗೆ ಮನನ ಮಾಡಿಕೊಟ್ಟರು.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೈನುಗಾರಿಕೆಗೆ ಮಾರಕವಾಗಿರುವ ಕಾಲುಬಾಯಿ ರೋಗ, ರಾಸುಗಳಿಗೆ ಕೊಡುವ ಲಸಿಕೆಗಳು, ಅವುಗಳ ಉಪಯೋಗಗಳ ಬಗ್ಗೆ ಲಸಿಕೆಗಳ ಬಗ್ಗೆ ರೈತರಿಗೆ ಇರುವ ತಪ್ಪು ಕಲ್ಪನೆಯನ್ನು ರೈತರಿಗೆ ಮನನ ಮಾಡಿದ್ದಲ್ಲದೇ, ರಾಸುಗಳಲ್ಲಿರುವ ಜಂತುಹುಳುಗಳನ್ನು ಹೊಲದಲ್ಲಿರುವ ಬೆಳೆ-ಕಳೆಗಳಿಗೆ ಹೋಲಿಸಿದರು.
ಡಾ. ಈಶ್ವರಯ್ಯ, ಹಾಲು ಒಕ್ಕೂಟದಲ್ಲಿ ದೊರೆಯುವ ಸೌಲಭ್ಯಗಳಾದ ವಿದ್ಯಾರ್ಥಿ ವೇತನ, ಪಶು-ಕರು ಕೊಟ್ಟಿಗೆಗೆ ದೊರೆಯುವ ಸಹಾಯಧನ, ಹಸುವಿಮೆ, ಮೇವು ಕತ್ತರಿಸುವ ಯಂತ್ರ, ನಂದಿನಿ ಹಾಲು ಉತ್ಪನ್ನಗಳ ಬಳಕೆಗಳ ಬಗ್ಗೆ ರೈತರಿಗೆ ಮನದಟ್ಟು ಮಾಡಿಕೊಟ್ಟರು.
ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಂ.ಮುನಿಯಪ್ಪ, ಗ್ರಾಮದ ಹಿರಿಯರಾದ ಸಿ.ವಿ.ಕೃಷ್ಣಪ್ಪ, ಸಿ.ಎಂ.ನಾರಾಯಣಸ್ವಾಮಿ, ಬಜ್ಜಣ್ಣನವರ ಕೃಷ್ಣಪ್ಪ, ಆರ್.ಮಂಜುನಾಥ್, ಮಲ್ಲೇಶ್‌ಮೂರ್ತಿ, ಕೇಶವ, ಮೊಬೈಲ್ ಶಿವು, ಚಲಪತಿ, ಶಿವಾನಂದ, ಎಂ.ಚಂದ್ರಪ್ಪ, ಯುವಮುಖಂಡ ಶಿವಮಣಿ, ವಿದ್ಯಾರ್ಥಿಗಳಾದ ವೇಣು, ತೇಜಸ್, ಸುಮನ್, ರಾಮರೆಡ್ಡಿ, ಪೂರ್ಣಚಂದ್ರ, ಕಾರ್ತಿಕ್, ಸತಿಶ್, ಶಂಕರ್‌ಗೌಡ, ತರುಣ್, ಯಶಸ್ವಿನಿ, ಯಮುನ, ಯಶೀಕ ಮತ್ತಿತರು ಗುಂಪು ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದರು.