ಚಿಹ್ನೆ ಜಗಳ :ಅಪ್ಪನಿಗೆ ದೊಡ್ಡ ಸೈಕಲ್,ಮಗನಿಗೆ 3 ಗಾಲಿ ಸೈಕಲ್!
ಲಕ್ನೋ: ಕಳೆದ ಕೆಲ ದಿನಗಳಿಂದ ಸಮಾಜವಾದಿ ಪಕ್ಷದ ಬಿಕ್ಕಟ್ಟಿನೊಂದಿಗೆ ಎದ್ದಿದ್ದ ಚುನಾವಣಾ ಚಿಹ್ನೆ ಕುರಿತ ವಿವಾದ ಕೊನೆಗೂ ಕೊನೆಗೊಂಡಿದೆ. ಕೇಂದ್ರ ಚುನಾವಣಾ ಆಯೋಗದ ದೆಹಲಿ ಕಚೇರಿಯಲ್ಲಿ ನಡೆದ ಸಂಧಾನದಲ್ಲಿ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಲಾಗಿದೆ. ಸಂಧಾನದಪ್ರಕಾರ ಮುಂದಿನ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಎರಡೂ ಬಣಗಳಿಗೆ ಸೈಕಲ್ ಚಿಹ್ನೆಯೇ ಇರಲಿದೆ. ಆದರೆ ಇದರಲ್ಲಿ ಸಣ್ಣ ವ್ಯತ್ಯಾಸ ಮಾಡಲಾಗುವುದು.
ಅಪ್ಪ ಮುಲಾಯಂ ಸಿಂಗ್ ಬಣಕ್ಕೆ ದೊಡ್ಡ ಸೈಕಲ್‌ಚಿಹ್ನೆಯಾಗಿದ್ದು, ಮಗ ಅಖೀಲೇಶ್ ಬಣಕ್ಕೆ ಸಣ್ಣ 3 ಗಾಲಿ ಸೈಕಲ್ ಚಿಹ್ನೆಯಾಗಿರಲಿದೆ. ಸೈಕಲ್‌ಗಳಲ್ಲಿ ಮುಲಾಯಂ ಮತ್ತು ಅಖೀಲೇಶ್ ಕೂತಂತೆ ಚಿತ್ರಗಳೂ ಇರಲಿವೆ. ಇದು ಬಣಗಳನ್ನು ಗುರುತಿಸಲು ಮತದಾರರಿಗೆ ಸುಲಭವಾಗಿ ನೆರವಾಗಲಿದೆ ಎಂದು ಸುಳ್‌ಸುದ್ದಿ ಮೂಲಗಳು ಹೇಳಿವೆ.