• ಮುಖಪುಟ
  • ಸುದ್ದಿಗಳು
  • ರಾಜ್ಯ
  • ಓಟಿನ ಬೇಟೆ
  • ರಾಷ್ಟ್ರೀಯ
  • ಜಗತ್ತು
  • ಕ್ರೀಡೆ
  • ವಾಣಿಜ್ಯ
  • ಹೊರನಾಡು ಕನ್ನಡಿಗ
  • ನಿಮ್ಮ ಜಿಲ್ಲೆ
  • ಬೆಂಗಳೂರು ನಗರ
  • ಬೆಂಗಳೂರು ಗ್ರಾಮಾಂತರ
  • ಬೆಳಗಾವಿ
  • ಬಳ್ಳಾರಿ
  • ಬೀದರ
  • ಬಾಗಲಕೋಟೆ
  • ವಿಜಯಪುರ
  • ಚಾಮರಾಜನಗರ
  • ಚಿಕ್ಕಮಗಳೂರು
  • ಚಿಕ್ಕಬಳ್ಳಾಪುರ
  • ಚಿತ್ರದುರ್ಗ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ಗದಗ
  • ಕಲುಬುರಗಿ
  • ಹಾಸನ
  • ಹಾವೇರಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಮಂಡ್ಯ
  • ಮೈಸೂರು
  • ರಾಮನಗರ
  • ರಾಯಚೂರು
  • ಶಿವಮೊಗ್ಗ
  • ತುಮಕೂರು
  • ಉಡುಪಿ
  • ಉತ್ತರ ಕನ್ನಡ
  • ಯಾದಗಿರಿ
  • ಸುದಿನ
  • ಸುದಿನ ಆಯ್ಕೆ
  • ಪದಾರ್ಥ ಚಿಂತಾಮಣಿ
  • ಫ್ಯೂಷನ್ - ಪ್ರವಾಸ - ಮನರಂಜನೆ
  • ಯೋಗಕ್ಷೇಮ
  • ನಿಮ್ಮ ಊರು-ನಿಮ್ಮ ಧ್ವನಿ
  • ಎಜುಗೈಡ್
  • ಕರಾವಳಿ
  • ಮಂಗಳೂರು
  • ಪುತ್ತೂರು-ಬೆಳ್ತಂಗಡಿ
  • ಉಡುಪಿ
  • ಕುಂದಾಪುರ
  • ಕಾಸರಗೋಡು-ಮಡಿಕೇರಿ
  • ಸಿನೆಮಾ
  • ಬಾಲ್ಕನಿ-ಸ್ಯಾಂಡಲ್‌ವುಡ್‌ ಸುದ್ದಿ
  • ಬಾಲಿವುಡ್‌ ವಾರ್ತೆಗಳು
  • ಸಿನೆಪ್ಲೆಕ್ಸ್ -ಚಿತ್ರ ವಿಮರ್ಶೆ
  • ಸಂದರ್ಶನಗಳು
  • ಚಿತ್ರತಾರೆಗಳು
  • ಸಿನಿಮಾ ಗ್ಯಾಲರಿ
  • ವೈವಿಧ್ಯ
  • ನಗೆ ಹನಿ
  • ಕಿಚನ್ ರೂಂ
  • ಆರೋಗ್ಯ
  • ಫ್ಯಾಶನ್
  • ಪ್ರವಾಸ
  • ಅಂಕಣಗಳು
  • ವೆಬ್ ಫೋಕಸ್
  • ನೆಲದ ನಾಡಿ
  • ಕಾಸು ಕುಡಿಕೆ
  • ಚಕಿತ ಚಿತ್ತ
  • ಅಭಿಮತ
  • ವಿಐಪಿ ಕಾಲಂ
  • ದಾರಿ ದೀಪ
  • ಭಾವುಕ ಪ್ರಬುದ್ಧತೆ
  • ವಿಶೇಷ
  • ರಾಜಾಂಗಣ
  • ಮಾಡರ್ನ್ ಆಧ್ಯಾತ್ಮ
  • ರಾಜನೀತಿ
  • ನೇರಾ ನೇರ
  • ನಗರಮುಖಿ
  • ಪುರವಣಿಗಳು
  • ಐಸಿರಿ
  • ಜೋಶ್
  • ಅವಳು
  • ಚಿನ್ನಾರಿ
  • ಸುಚಿತ್ರಾ
  • ಐ ಲವ್ ಬೆಂಗಳೂರು
  • ಬಹುಮುಖಿ
  • ಸಾಪ್ತಾಹಿಕ ಸಂಪದ
  • ಮಹಿಳಾ ಸಂಪದ
  • ಯುವ ಸಂಪದ
  • ಆರೋಗ್ಯವಾಣಿ
  • ಕಲಾವಿಹಾರ
  • ಶಿಕ್ಷಣ ದರ್ಪಣ
  • ಜ್ಯೋತಿಷ್ಯ
  • ಇಂದಿನ ಪಂಚಾಂಗ
  • ದಿನ ಭವಿಷ್ಯ
  • ವಾರ ಭವಿಷ್ಯ
  • ವರ್ಷ ಭವಿಷ್ಯ
  • ವಾಸ್ತು
  • ಗ್ಯಾಲರಿ
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಪ್ರಕೃತಿ
  • ವೈವಿಧ್ಯ
  • ಸಿನಿಮಾ ಗ್ಯಾಲರಿ
  • ಕ್ರೀಡೆ
  • ಸುದಿನ
  • ವಿಡಿಯೊ
3'

Ray of Hope: ಯಜಮಾನನಿಂದ ಅಮರ್‌ ತನಕ

ರೂಪತಾರಾ
Team Udayavani, Aug 05, 2018, 12:49 PM IST

ತಾನ್ಯಾ ಹೋಪ್‌ ಒಂದೆರಡು ತಿಂಗಳಿನಿಂದ ಕನ್ನಡ ಚಿತ್ರರಂಗದಲ್ಲಿ ಜೋರಾಗಿ ಕೇಳಿಬಂದ ಹೆಸರು. "ತಾನ್ಯಾ ಬರುತ್ತಾರಂತೆ, ತಾನ್ಯಾ ಜೋಡಿಯಂತೆ, ಹಾಗಂತೆ- ಹೀಗಂತೆ' ಗಾಂಧಿನಗರದಲ್ಲಿ ತಾನ್ಯಾ ಬಗ್ಗೆ ಸುದ್ದಿಗಳು ಓಡಾಡಿದ್ದೇ ಓಡಾಡಿದ್ದು. ಅಷ್ಟಕ್ಕೂ ಯಾರು ಈ ತಾನ್ಯಾ ಎಂದು ನೀವು ಕೇಳಿದರೆ, ಒಂದಲ್ಲ ಎರಡಲ್ಲ, ಬರೋಬ್ಬರಿ ಮೂರು ಸಿನಿಮಾಗಳ ಹೆಸರು ಹೇಳಬೇಕಾಗುತ್ತದೆ. ಮೂರಕ್ಕೇ ಮೂರು ಸಿನಿಮಾಗಳು ಕೂಡಾ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳು ಎಂಬುದು ಮತ್ತೂಂದು ವಿಶೇಷ.

ಉಪೇಂದ್ರ ಅವರ "ಹೋಮ್‌ ಮಿನಿಸ್ಟರ್‌', ದರ್ಶನ್‌ ಅವರ "ಯಜಮಾನ' ಹಾಗೂ ಅಂಬರೀಶ್‌ ಪುತ್ರ ಅಭಿಷೇಕ್‌ ಹೀರೋ ಆಗಿ ಲಾಂಚ್‌ ಆಗುತ್ತಿರುವ "ಅಮರ್‌' ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿರುವವರೇ ತಾನ್ಯಾ. ಕೆಲವರು ಚಿತ್ರರಂಗಕ್ಕೆ ಬಲಗಾಲಿಟ್ಟು ಎಂಟ್ರಿಕೊಡುತ್ತಾರೆ. ಎಂಟ್ರಿಕೊಟ್ಟ ದಿನದಿಂದಲೇ ಅವರಿಗೆ ಒಳ್ಳೆಯ ಸಿನಿಮಾಗಳು ಸಿಗುತ್ತಾ, ಬಿಝಿಯಾಗುತ್ತಾ ಹೋಗುತ್ತಾರೆ. ವಿಶೇಷವೆಂದರೆ ಒಂದೇ ಒಂದು ಸಿನಿಮಾ ರಿಲೀಸ್‌ ಆಗುವ ಮುನ್ನವೇ ಕೈ ತುಂಬಾ ಅವಕಾಶ ಸಿಗುತ್ತದೆ.

ಸದ್ಯ ಈ ಮಾತು ತಾನ್ಯಾಗೂ ಅನ್ವಯವಾಗುತ್ತದೆ. ಮೇಲೆ ಹೇಳಿದ ಯಾವ ಸಿನಿಮಾಗಳು ಕೂಡಾ ಬಿಡುಗಡೆಯಾಗಿಲ್ಲ. ಅದಾಗಲೇ ಒಂದರ ಹಿಂದೊಂದರಂತೆ ಸಿನಿಮಾಗಳು ತಾನ್ಯಾಗೆ ಸಿಕ್ಕಿವೆ. ಯಾರು ಈ ತಾನ್ಯಾ ಎಂದು ನೀವು ಕೇಳಿದರೆ ಮಹಾರಾಷ್ಟ್ರ ಮೂಲದ ಬೆಂಗಳೂರು ಹುಡುಗಿ. ತಾನ್ಯಾ ಹುಟ್ಟಿ ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲಿ. ಎಲ್ಲಾ ನಟಿಯರಂತೆ ತಾನ್ಯಾ ಕೂಡಾ ರ್‍ಯಾಂಪ್‌ ವಾಕ್‌, ಮಾಡೆಲಿಂಗ್‌ ಮಾಡಿಯೇ ಸಿನಿಮಾ ರಂಗಕ್ಕೆ ಬಂದವರು.

2015ರ ಮಿಸ್‌ ಇಂಡಿಯಾ ಅಂತಿಮ ಸುತ್ತಿನವರೆಗೆ ಬಂದ ಚೆಲುವೆ ಈ ತಾನ್ಯಾ. ಹಾಗಾಗಿ, ತಾನ್ಯಾಗೆ ಮಾಡೆಲಿಂಗ್‌ ಫೀಲ್ಡ್‌ನಲ್ಲಿ ಒಳ್ಳೆಯ ಹೆಸರಿದೆ. ಮಾಡೆಲಿಂಗ್‌ ಕ್ಷೇತ್ರಕ್ಕೆ ಹೋದವರು ನಂತರ ಎಂಟ್ರಿಕೊಡೋದು ಸಿನಿಮಾಕ್ಕೆ. ಅದರಂತೆ ತಾನ್ಯಾ ಕೂಡಾ ಸಿನಿಮಾಕ್ಕೆ ಎಂಟ್ರಿಕೊಟ್ಟಿದ್ದಾರೆ.

ಮೊದಲೇ ಹೇಳಿದಂತೆ ತಾನ್ಯಾ ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲಾದರೂ ಆಕೆ ಸಿನಿಮಾಕ್ಕೆ ಬಂದಿದ್ದು ತೆಲುಗು ಚಿತ್ರರಂಗದ ಮೂಲಕ. 2016ರಲ್ಲಿ "ನೇನು ಶೈಲಜಾ' ಎಂಬ ಸಿನಿಮಾ ಮೂಲಕ ತಾನ್ಯಾ ಬಣ್ಣದ ಲೋಕಕ್ಕೆ ಎಂಟ್ರಿಕೊಡುತ್ತಾರೆ. ಹೀಗೆ ತೆಲುಗು ಸಿನಿಮಾ ಮೂಲಕ ಎಂಟ್ರಿಕೊಟ್ಟ ತಾನ್ಯಾ ಈಗಾಗಲೇ ತೆಲುಗಿನ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದಲ್ಲದೇ ಒಂದು ತಮಿಳು ಸಿನಿಮಾ ಕೂಡಾ ತಾನ್ಯಾ ಕೈಯಲ್ಲಿದೆ. 

ಹೋಮ್‌ ಮಿನಿಸ್ಟರ್‌ ಮೂಲಕ ಕನ್ನಡಕ್ಕೆ: ತೆಲುಗು ಸಿನಿಮಾದಲ್ಲಿ ಬಿಝಿಯಾಗಿದ್ದ ತಾನ್ಯಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರೋದು "ಹೋಮ್‌ ಮಿನಿಸ್ಟರ್‌' ಸಿನಿಮಾ ಮೂಲಕ. ಉಪೇಂದ್ರ ನಾಯಕರಾಗಿರುವ "ಹೋಮ್‌ ಮಿನಿಸ್ಟರ್‌' ಸಿನಿಮಾವನ್ನು ತೆಲುಗಿನ ನಿರ್ದೇಶಕರೊಬ್ಬರು ಮಾಡುತ್ತಿದ್ದು, ಇದು ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲೂ ತಯಾರಾಗುತ್ತಿದೆ. ಈಗಾಗಲೇ ತೆಲುಗಿನಲ್ಲಿ ತಾನ್ಯಾ ಮುಖ ಪರಿಚಯವಿರುವುದರಿಂದ "ಹೋಮ್‌ ಮಿನಿಸ್ಟರ್‌' ಚಿತ್ರದ ಒನ್‌ ಆಫ್ ದಿ ನಾಯಕಿಯಾಗಿ ತಾನ್ಯಾಗೆ ಅವಕಾಶ ನೀಡಲಾಗಿದೆ.

ಈ ಮೂಲಕ ಸ್ಟಾರ್‌ ನಟನ ಚಿತ್ರದೊಂದಿಗೆ ತಾನ್ಯಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಂತಾಗಿದೆ. ಉಪೇಂದ್ರ ಜೊತೆ ನಟಿಸಿರುವ ತಾನ್ಯಾ ಸಹಜವಾಗಿಯೇ ಖುಷಿಯಾಗಿದ್ದಾರೆ. "ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಕೆಲವೇ ವರ್ಷಗಳಲ್ಲಿ ಉಪೇಂದ್ರ ಅವರಂತಹ ಸ್ಟಾರ್‌ ನಟನ ಚಿತ್ರದಲ್ಲಿ ಅವಕಾಶ ಸಿಕ್ಕಿರುವುದು ತುಂಬಾ ಖುಷಿಯಾಗಿದೆ' ಎನ್ನುವ ತಾನ್ಯಾ, ಉಪ್ಪಿ ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತರಂತೆ. "ನಿಮ್ಮ ಸುತ್ತ ಉಪೇಂದ್ರ ಇದ್ದರೆ ಸಿನಿಮಾ ಸೇರಿದಂತೆ ಸಾಕಷ್ಟು ಹೊಸ ವಿಷಯಗಳನ್ನು ಕಲಿಯಬಹುದು.

ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ ಆಗಿರುವುದರಿಂದ ಅವರಿಗೆ ಹೊಸ ಹೊಸ ಆಲೋಚನೆಗಳು ಬರುತ್ತಲೇ ಇರುತ್ತದೆ. ಸಿನಿಮಾದ ಎಲ್ಲಾ ವಿಭಾಗಗಳ ವಿಷಯ ತಿಳಿದುಕೊಂಡಿರುವ ಒಬ್ಬ ವ್ಯಕ್ತಿಯಾಗಿ ಅವರು ತುಂಬಾನೇ ಇಷ್ಟವಾಗುತ್ತಾರೆ. ಅವರ ಜೊತೆ ಎಷ್ಟು ದಿನ ನೀವು ಕೆಲಸ ಮಾಡುತ್ತೀರೋ ಅಷ್ಟು ದಿನ ಹೊಸ ವಿಚಾರಗಳನ್ನು ಕಲಿಯಬಹುದು. ಸಾಕಷ್ಟು ವಿಚಾರ ತಿಳಿದುಕೊಂಡಿರುವ ಒಬ್ಬ ಸ್ಟಾರ್‌ ನಟ ಆದರೂ ಅವರು ತುಂಬಾ ಸಿಂಪಲ್‌ ಆಗಿ, ಎಲ್ಲರೊಂದಿಗೆ ಬೆರೆಯುತ್ತಿರುತ್ತಾರೆ' ಎಂದು ಉಪೇಂದ್ರ ಅವರ ಜೊತೆ ನಟಿಸಿದ ಅನುಭವ ಹಂಚಿಕೊಳ್ಳುತ್ತಾರೆ ತಾನ್ಯಾ. 

ಮೊದಲೇ ಹೇಳಿದಂತೆ ತಾನ್ಯಾ ಅದೃಷ್ಟವಂತೆ. "ಹೋಮ್‌ ಮಿನಿಸ್ಟರ್‌'ನಂತಹ ದೊಡ್ಡ ಪ್ರಾಜೆಕ್ಟ್ ಮೂಲಕ ಎಂಟ್ರಿಕೊಟ್ಟ ತಾನ್ಯಾಗೆ ಅದರ ಬೆನ್ನಲ್ಲೇ ಮತ್ತೂಂದು ದೊಡ್ಡ ಪ್ರಾಜೆಕ್ಟ್ ಸಿಗುತ್ತದೆ. ಅದು "ಯಜಮಾನ'. ದರ್ಶನ್‌ ನಾಯಕರಾಗಿರುವ "ಯಜಮಾನ' ಚಿತ್ರದ ಇಬ್ಬರು ನಾಯಕಿಯರಲ್ಲಿ ತಾನ್ಯಾ ಕೂಡಾ ಒಬ್ಬರು. ಈ ಚಿತ್ರದಲ್ಲಿ ತನಿಖಾ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ರಹಸ್ಯವೊಂದನ್ನು ಬಯಲು ಮಾಡುವಲ್ಲಿ ದರ್ಶನ್‌ಗೆ ಸಾಥ್‌ ನೀಡುವ ಪಾತ್ರ ಅವರದು.

ತಾನ್ಯಾಗೆ ಈ ಸಿನಿಮಾ ಸಿಕ್ಕಿದ್ದು "ಹೋಮ್‌ ಮಿನಿಸ್ಟರ್‌' ಮೂಲಕ.  "ಹೋಮ್‌ ಮಿನಿಸ್ಟರ್‌' ಚಿತ್ರದಲ್ಲಿ ನಟಿಸುತ್ತಿರುವ ತಾನ್ಯಾ ಬಗ್ಗೆ ತಿಳಿದುಕೊಂಡ "ಯಜಮಾನ' ಚಿತ್ರದ ನಿರ್ಮಾಪಕಿ ಶೈಲಜಾ ನಾಗ್‌, ತಾನ್ಯಾಗೆ ಈ ಅವಕಾಶ ನೀಡಿದರಂತೆ. ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ ಇದಾಗಿದ್ದರೂ, ತಾನ್ಯಾ ಪಾತ್ರ ಒಂದೊಳ್ಳೆಯ ಸಂದೇಶದೊಂದಿಗೆ ಕೂಡಿದೆಯಂತೆ.

ಇನ್ನು, ತಾನ್ಯಾ "ಯಜಮಾನ'ನನ್ನು ಇಷ್ಟಪಡಲು ಮತ್ತೂಂದು ಕಾರಣವಿದೆ. ಅದು ಡ್ಯಾನ್ಸ್‌. ತಾನ್ಯಾಗೆ ಡ್ಯಾನ್ಸ್‌ ಎಂದರೆ ತುಂಬಾ ಇಷ್ಟವಂತೆ. ಹಾಗಂತ ಆಕೆ ಪ್ರೊಫೆಶನಲ್‌ ಡ್ಯಾನ್ಸರ್‌ ಅಲ್ಲ. ಆದರೆ, ಆಕೆಯ ಅನೇಕ ಸ್ನೇಹಿತರು ಒಳ್ಳೆಯ ಡ್ಯಾನ್ಸರ್‌ಗಳಾಗಿದ್ದಾರೆ. ಅವರ ಜೊತೆ ಸೇರಿ ನೀಟಾಗಿ ಸ್ಟೆಫ್ ಹಾಕಲು ಕಲಿತಿದ್ದಾರಂತೆ. "ಯಜಮಾನ' ಚಿತ್ರದಲ್ಲಿ ತಾನ್ಯಾಗೆ ಒಂದು ಹಾಡಿದ್ದು, ಇದು ಆಕೆ ಸಂಪೂರ್ಣವಾಗಿ ತೊಡಗಿಸಿಕೊಂಡ ಮೊದಲ ಹಾಡಂತೆ. 

ಒಳ್ಳೆಯ ಅವಕಾಶ: ತಾನ್ಯಾ ಹೋಪ್‌ 2015ರಲ್ಲಿ ಮಿಸ್‌ ಇಂಡಿಯಾ ಫೈನಲಿಸ್ಟ್‌ನಲ್ಲಿದ್ದವರು. ಚಿತ್ರರಂಗಕ್ಕೆ ಬರಲು ವೇದಿಕೆ ಕಲ್ಪಿಸಿದ್ದು ಕೂಡಾ ಅದೇ ಮಿಸ್‌ ಇಂಡಿಯಾ ಸ್ಪರ್ಧೆ. ಇದನ್ನು ತಾನ್ಯಾ ಕೂಡಾ ಒಪ್ಪಿಕೊಳ್ಳುತ್ತಾರೆ. "ಮಿಸ್‌ ಇಂಡಿಯಾ ನಿಮಗೆ ಒಳ್ಳೆಯ ಅವಕಾಶವನ್ನು ಕಲ್ಪಿಸಿಕೊಡುವುದರಲ್ಲಿ ಎರಡು ಮಾತಿಲ್ಲ. ಸಾಮಾನ್ಯವಾಗಿ ನಿಮಗೆ ಸಿಗದಂತಹ ಅವಕಾಶ ಮಿಸ್‌ ಇಂಡಿಯಾದಲ್ಲಿ ಭಾಗವಹಿಸುವುದರಿಂದ ಬರುತ್ತದೆ.

ನಿಮ್ಮ ಪ್ರತಿಭೆ ಮೇಲೆ ಇದು ಬೆಳಕು ಚೆಲ್ಲುತ್ತದೆ ಮತ್ತು ಚಿತ್ರರಂಗದ ಬಗ್ಗೆ ನಿಮಲ್ಲೂ ಅರಿವು ಹಾಗೂ ಆಸಕ್ತಿ ಮೂಡಿಸುತ್ತದೆ' ಎಂದು ಮಿಸ್‌ ಇಂಡಿಯಾ ಬಗ್ಗೆ ಹೇಳುತ್ತಾರೆ ತಾನ್ಯಾ. ಇನ್ನು ತಾನ್ಯಾಗೆ ತುಂಬಾ ಸೂಕ್ಷ್ಮವಾದ, ನಟನೆಗೆ ಹೆಚ್ಚು ಅವಕಾಶವಿರುವ ಪಾತ್ರಗಳನ್ನು ಮಾಡೋದೆಂದರೆ ಇಷ್ಟವಂತೆ. ಆ ನಿಟ್ಟಿನಲ್ಲೇ ಪಾತ್ರದ ಆಯ್ಕೆ ಇರುತ್ತದೆ ಎನ್ನುತ್ತಾರೆ.

ಬರಹ: ರವಿಪ್ರಕಾಶ್‌ ರೈ

Tags: 
ರೂಪತಾರಾ
Roopatara
ತಾನ್ಯಾ ಹೋಪ್‌
ಹೋಮ್‌ ಮಿನಿಸ್ಟರ್‌
ಯಜಮಾನ
ಅಮರ್‌
Tanya Hope
Home Minister
Yajamana
Amar
  • NEXT ARTICLE
  • ಮುಖಪುಟ DOWNLOADED

  • ಸುದ್ದಿಗಳು

    • ಸುದ್ದಿಗಳು

    • ರಾಜ್ಯ DOWNLOADED

    • ಓಟಿನ ಬೇಟೆ DOWNLOADED

    • ರಾಷ್ಟ್ರೀಯ DOWNLOADED

    • ಜಗತ್ತು DOWNLOADED

    • ಕ್ರೀಡೆ DOWNLOADED

    • ವಾಣಿಜ್ಯ DOWNLOADED

    • ಹೊರನಾಡು ಕನ್ನಡಿಗ DOWNLOADED

  • ನಿಮ್ಮ ಜಿಲ್ಲೆ

    • ನಿಮ್ಮ ಜಿಲ್ಲೆ

    • ಬೆಂಗಳೂರು ನಗರ DOWNLOADED

    • ಬೆಂಗಳೂರು ಗ್ರಾಮಾಂತರ DOWNLOADED

    • ಬೆಳಗಾವಿ DOWNLOADED

    • ಬಳ್ಳಾರಿ DOWNLOADED

    • ಬೀದರ DOWNLOADED

    • ಬಾಗಲಕೋಟೆ DOWNLOADED

    • ವಿಜಯಪುರ DOWNLOADED

    • ಚಾಮರಾಜನಗರ DOWNLOADED

    • ಚಿಕ್ಕಮಗಳೂರು DOWNLOADED

    • ಚಿಕ್ಕಬಳ್ಳಾಪುರ DOWNLOADED

    • ಚಿತ್ರದುರ್ಗ DOWNLOADED

    • ದಕ್ಷಿಣ ಕನ್ನಡ DOWNLOADED

    • ದಾವಣಗೆರೆ DOWNLOADED

    • ಧಾರವಾಡ DOWNLOADED

    • ಗದಗ DOWNLOADED

    • ಕಲುಬುರಗಿ DOWNLOADED

    • ಹಾಸನ DOWNLOADED

    • ಹಾವೇರಿ DOWNLOADED

    • ಕೊಡಗು DOWNLOADED

    • ಕೊಪ್ಪಳ DOWNLOADED

    • ಕೋಲಾರ DOWNLOADED

    • ಮಂಡ್ಯ DOWNLOADED

    • ಮೈಸೂರು DOWNLOADED

    • ರಾಮನಗರ DOWNLOADED

    • ರಾಯಚೂರು DOWNLOADED

    • ಶಿವಮೊಗ್ಗ DOWNLOADED

    • ತುಮಕೂರು DOWNLOADED

    • ಉಡುಪಿ DOWNLOADED

    • ಉತ್ತರ ಕನ್ನಡ DOWNLOADED

    • ಯಾದಗಿರಿ DOWNLOADED

  • ಸುದಿನ

    • ಸುದಿನ

    • ಸುದಿನ ಆಯ್ಕೆ DOWNLOADED

    • ಪದಾರ್ಥ ಚಿಂತಾಮಣಿ DOWNLOADED

    • ಫ್ಯೂಷನ್ - ಪ್ರವಾಸ - ಮನರಂಜನೆ DOWNLOADED

    • ಯೋಗಕ್ಷೇಮ DOWNLOADED

    • ನಿಮ್ಮ ಊರು-ನಿಮ್ಮ ಧ್ವನಿ DOWNLOADED

    • ಎಜುಗೈಡ್ DOWNLOADED

  • ಕರಾವಳಿ

    • ಕರಾವಳಿ

    • ಮಂಗಳೂರು DOWNLOADED

    • ಪುತ್ತೂರು-ಬೆಳ್ತಂಗಡಿ DOWNLOADED

    • ಉಡುಪಿ DOWNLOADED

    • ಕುಂದಾಪುರ DOWNLOADED

    • ಕಾಸರಗೋಡು-ಮಡಿಕೇರಿ DOWNLOADED

  • ಸಿನೆಮಾ

    • ಸಿನೆಮಾ

    • ಬಾಲ್ಕನಿ-ಸ್ಯಾಂಡಲ್‌ವುಡ್‌ ಸುದ್ದಿ DOWNLOADED

    • ಬಾಲಿವುಡ್‌ ವಾರ್ತೆಗಳು DOWNLOADED

    • ಸಿನೆಪ್ಲೆಕ್ಸ್ -ಚಿತ್ರ ವಿಮರ್ಶೆ DOWNLOADED

    • ಸಂದರ್ಶನಗಳು DOWNLOADED

    • ಚಿತ್ರತಾರೆಗಳು DOWNLOADED

    • ಸಿನಿಮಾ ಗ್ಯಾಲರಿ DOWNLOADED

  • ವೈವಿಧ್ಯ

    • ವೈವಿಧ್ಯ

    • ನಗೆ ಹನಿ DOWNLOADED

    • ಕಿಚನ್ ರೂಂ DOWNLOADED

    • ಆರೋಗ್ಯ DOWNLOADED

    • ಫ್ಯಾಶನ್ DOWNLOADED

    • ಪ್ರವಾಸ DOWNLOADED

  • ಅಂಕಣಗಳು

    • ಅಂಕಣಗಳು

    • ವೆಬ್ ಫೋಕಸ್ DOWNLOADED

    • ನೆಲದ ನಾಡಿ DOWNLOADED

    • ಕಾಸು ಕುಡಿಕೆ DOWNLOADED

    • ಚಕಿತ ಚಿತ್ತ DOWNLOADED

    • ಅಭಿಮತ DOWNLOADED

    • ವಿಐಪಿ ಕಾಲಂ DOWNLOADED

    • ದಾರಿ ದೀಪ DOWNLOADED

    • ಭಾವುಕ ಪ್ರಬುದ್ಧತೆ DOWNLOADED

    • ವಿಶೇಷ DOWNLOADED

    • ರಾಜಾಂಗಣ DOWNLOADED

    • ಮಾಡರ್ನ್ ಆಧ್ಯಾತ್ಮ DOWNLOADED

    • ರಾಜನೀತಿ DOWNLOADED

    • ನೇರಾ ನೇರ DOWNLOADED

    • ನಗರಮುಖಿ DOWNLOADED

  • ಪುರವಣಿಗಳು

    • ಪುರವಣಿಗಳು

    • ಐಸಿರಿ DOWNLOADED

    • ಜೋಶ್ DOWNLOADED

    • ಅವಳು DOWNLOADED

    • ಚಿನ್ನಾರಿ DOWNLOADED

    • ಸುಚಿತ್ರಾ DOWNLOADED

    • ಐ ಲವ್ ಬೆಂಗಳೂರು DOWNLOADED

    • ಬಹುಮುಖಿ DOWNLOADED

    • ಸಾಪ್ತಾಹಿಕ ಸಂಪದ DOWNLOADED

    • ಮಹಿಳಾ ಸಂಪದ DOWNLOADED

    • ಯುವ ಸಂಪದ DOWNLOADED

    • ಆರೋಗ್ಯವಾಣಿ DOWNLOADED

    • ಕಲಾವಿಹಾರ DOWNLOADED

    • ಶಿಕ್ಷಣ ದರ್ಪಣ DOWNLOADED

  • ಜ್ಯೋತಿಷ್ಯ

    • ಜ್ಯೋತಿಷ್ಯ

    • ಇಂದಿನ ಪಂಚಾಂಗ DOWNLOADED

    • ದಿನ ಭವಿಷ್ಯ DOWNLOADED

    • ವಾರ ಭವಿಷ್ಯ DOWNLOADED

    • ವರ್ಷ ಭವಿಷ್ಯ DOWNLOADED

    • ವಾಸ್ತು DOWNLOADED

  • ಗ್ಯಾಲರಿ

    • ಗ್ಯಾಲರಿ

    • ರಾಜ್ಯ DOWNLOADED

    • ರಾಷ್ಟ್ರೀಯ DOWNLOADED

    • ವಿದೇಶ DOWNLOADED

    • ಪ್ರಕೃತಿ DOWNLOADED

    • ವೈವಿಧ್ಯ DOWNLOADED

    • ಸಿನಿಮಾ ಗ್ಯಾಲರಿ DOWNLOADED

    • ಕ್ರೀಡೆ DOWNLOADED

    • ಸುದಿನ DOWNLOADED

  • ವಿಡಿಯೊ DOWNLOADED

  • ePaper

  • Udayavani English Edition