ಗದಗ:ಮದಿರೆ ಮತ್ತಿನಲ್ಲಿ ಪೇದೆಗಳ ಬೀದಿ ಕಾಳಗ; ವಿಡಿಯೋ ವೈರಲ್ !
ಗದಗ: ಕಾನೂನು ಕಾಯಬೇಕಿದ್ದ ಪೊಲೀಸರಿಬ್ಬರು ಕುಡಿದ ಅಮಲಿನಲ್ಲಿ ಸಾರ್ವಜನಿಕವಾಗಿ ನಡುಬೀದಿಯಲ್ಲಿ ಕಿತ್ತಾಟಕ್ಕಿಳಿದ ನಾಚಿಕೆಗೇಡು ಘಟನೆ ಬೆಟಗೇರಿ ಬಳಿಯ ಸಹಸ್ರಾರ್ಜುನ ವೃತ್ತದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಸಮವಸ್ತ್ರದಲ್ಲಿದ್ದ ಮಹಿಳಾ ಠಾಣೆಯ ಕಾನ್ಸ್‌ಟೇಬಲ್ ಶರಣಪ್ಪ ಬಸ್ಸಾಪುರ ಮತ್ತು ಗ್ರಾಮೀಣ ಠಾಣೆಯ ಪೇದೆ ಮಂಜುನಾಥ್ ಬಾರಕೇರ್ ಪರಸ್ಪರ ಜಗಳಕ್ಕಿಳಿದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
ಉಚಿತ ಮನೋರಂಜನೆ ನೋಡಿದ ಸಾರ್ವಜನಿಕರು ಇಬ್ಬರ ಜಗಳವನ್ನು ಮೊಬೈಲ್‌ಗಳಲ್ಲಿ ಚಿತ್ರೀಕರಿಸಿ ವೈರಲ್ ಮಾಡಿದ್ದಾರೆ.
ವಿಷಯ ಗಮನಕ್ಕೆ ಬರುತ್ತಿದ್ದಂತೆ ಎಸ್‌ಪಿ ಸಂತೋಷ್ ಬಾಬು ಅವರು ಇಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇಬ್ಬರನ್ನೂ ಅಮಾನತು ಮಾಡಿರುವ ಬಗ್ಗೆ ವರದಿಯಾಗಿದೆ.