ಸುದ್ದಿ ಕೋಶ: ವಿಶ್ವದ ದೊಡ್ಡ ಮೊಬೈಲ್ ಉತ್ಪಾದನಾ ಘಟಕ ನಮ್ಮಲ್ಲಿ
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್- ಜೆ-ಇನ್ ಸೋಮವಾರ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್81ರಲ್ಲಿ ಸ್ಯಾಮ್‌ಸಂಗ್ ಮೊಬೈಲ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದ್ದಾರೆ. ಮೆಟ್ರೋ ರೈಲಿನಲ್ಲಿಯೇ ಮೂನ್-ಜೆ-ಇನ್ ಮತ್ತು ನರೇಂದ್ರ ಮೋದಿ ಆಗಮಿಸಿದ್ದಾರೆ. ಇಲ್ಲಿ ಪ್ರತಿ ತಿಂಗಳು ಉತ್ಪಾದನೆಯಾಗಲಿರುವ ಮೊಬೈಲ್ ಫೋನ್‌ಗಳಿಂದಾಗಿ ಅದು ವಿಶ್ವದ ಅತ್ಯಂತ ದೊಡ್ಡ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
35 ಎಕರೆ ಘಟಕ ಇರುವ ಜಮೀನಿನ ವಿಸ್ತೀರ್ಣ
1995 ಈ ವರ್ಷ ಘಟಕ ಶುರುವಾದದ್ದು
124 ಮಿಲಿಯ 2017ರಲ್ಲಿ ದೇಶದಲ್ಲಿ ಮಾರಾಟವಾದ ಫೋನ್‌ಗಳು
4,915 ಕೋಟಿ ರೂ.ಘಟಕ ವಿಸ್ತರಣೆಗೆ ಮಾಡಲಾಗಿರುವ ವೆಚ್ಚ
50ಲಕ್ಷ ಪ್ರತಿ ತಿಂಗಳು ಈಗ ಉತ್ಪಾದನೆ ಆಗುವ ಮೊಬೈಲ್ ಫೋನ್‌ಗಳು
1.2ಲಕ್ಷ ವಿಸ್ತರಣೆಗೊಂಡ ಘಟಕದ ಉತ್ಪಾದನಾ ಸಾಮರ್ಥ್ಯ ಪ್ರತಿ ತಿಂಗಳಿಗೆ
35,000 ಉದ್ಯೋಗದ ಸಾಧ್ಯತೆ
ಈ ಘಟಕ ಕೇವಲ ನೋಯ್ಡಾ, ಉತ್ತರ ಪ್ರದೇಶಕ್ಕೆ ಹೆಮ್ಮೆಯ ವಿಚಾರ ಅಲ್ಲ. ದೇಶಕ್ಕೇ ಹೆಮ್ಮೆಯ ಪ್ರತೀಕ. ಭಾರತದಲ್ಲಿಯೇ ಉತ್ಪಾದಿಸಿ ಎಂಬ ಘೋಷ ವಾಕ್ಯಕ್ಕೆ ಅನುಗುಣವಾಗಿದೆ. ಸ್ಯಾಮ್‌ಸಂಗ್‌ನ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಘಟಕವೂ ಇಲ್ಲೇ ಶುರುವಾಗಲಿದೆ.
ನರೇಂದ್ರ ಮೋದಿ, ಪ್ರಧಾನಮಂತ್ರಿ