ಲೈಫ್ ಕ್ಯಾಮೆರಾ ಆ್ಯಕ್ಷನ್
ಟ್ವಿಸ್ಟರ್ (1996)
ನಿರ್ದೇಶನ: ಜ್ಯಾನ್ ಡಿ ಬೊಂಟ್
ಪಾಶ್ಚಿಮಾತ್ಯ ರಾಷ್ಟ್ರಗಳ ಅಲ್ಲಲ್ಲಿ ಬೀಸುವ "ಟ್ವಿಸ್ಟರ್' ಎಂಬ ಬಿರುಗಾಳಿ ಉಂಟುಮಾಡುವ ಅನಾಹುತಗಳನ್ನು ಆಧರಿಸಿ ತೆಗೆದ ಚಿತ್ರವಿದು. ಚಿತ್ರದಲ್ಲಿ ಅಮೆರಿಕದ ಒಕ್ಲಾಹೊಮಾ ನಗರವನ್ನು ಕೇಂದ್ರ ಬಿಂದುವಾಗಿ ಮಾಡಿಕೊಂಡು ಕಥೆ ಹೆಣೆಯಲಾಗಿದೆ. ಈ ಊರಿಗೆ ಬಂದು ಅಪ್ಪಳಿಸುವ "ಎಫ್ 5 ಟೊರಾಂಟೊ' ಎಂಬ ಭೀಕರ ಬಿರುಗಾಳಿ ಉಂಟು ಮಾಡಿದ ಅಲ್ಲೋಲ ಕಲ್ಲೋಲವೇ ಚಿತ್ರಕತೆಯ ಸಾರ. ಒಮ್ಮೆ ಬೀಸಿದರೆ ಇಡೀ ನಗರವನ್ನೇ ಎತ್ತಿಕೊಂಡು ಹೋಗುವಷ್ಟು ಪ್ರಬಲವಾಗಿ ಬೀಸುವ ಈ ರಕ್ಕಸ ಬಿರುಗಾಳಿಯನ್ನು ಮೀರಿ ಚಿತ್ರದ ನಾಯಕ ಬಿಲ್‌ನ ಕುಟುಂಬ ಅನುಭವಿಸುವ ಪಡಿಪಾಟಲೇ ಈ ಚಿತ್ರದ ಕಥಾ ವಸ್ತು. ಬಿರುಗಾಳಿಯಿಂದ ತಪ್ಪಿಸಿಕೊಳ್ಳಲು, ನೆಲದಡಿ ಅವಿತು, ಅಲ್ಲೂ ಆಪತ್ತು ಎದುರಾದಾಗ, ಮತ್ತೆ ಮತ್ತೆ ಸವಾಲುಗಳಿಗೆ ಮುಖಾಮುಖೀಯಾಗುವ ಆ ಚಿತ್ರಣ ಕ್ಷಣಕ್ಷಣಕ್ಕೂ ಎದೆ ಝಲ್ಲೆನಿಸುತ್ತೆ. ನಮ್ಮ ಸುತ್ತಮುತ್ತಲೇ ಗಾಳಿ ಇಂಥ ವಿಕೋಪ ತಾಳಿತೇ ಎಂಬ ಭ್ರಮೆಯನ್ನೂ ಹುಟ್ಟಿಸುತ್ತೆ.
● ಚೇತನ್ ಓ.ಆರ್