20 ವರ್ಷಗಳ ಬಳಿಕ ಸ್ಫೋಟ ಆರೋಪಿ ಸೆರೆ
ಚೆನ್ನೈ: 1998ರ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟ ಆರೋಪಿಯನ್ನು 20 ವರ್ಷಗಳ ಬಳಿಕ ತಮಿಳುನಾಡು ಪೊಲೀಸ್ ಇಲಾಖೆಯ ವಿಶೇಷ ತನಿಖಾ ವಿಭಾಗ ಬಂಧಿಸಿದೆ. ನಿರ್ದಿಷ್ಟ ಗುಪ್ತಚರ ಮಾಹಿತಿ ಆಧರಿಸಿ ಆರೋಪಿ ಎನ್.ಪಿ. ನೂಹು ಅಲಿಯಾಸ್ ಮಾನ್ಕಾವು ರಶೀದ್‌ನನ್ನು ಕೇರಳದ ಕಲ್ಲಿಕೋಟೆಯಲ್ಲಿ ಮಂಗಳವಾರ ಬಂಧಿಸಲಾಯಿತು. ಕೊಯಮತ್ತೂರು ಸ್ಫೋಟದಲ್ಲಿ 58 ಜನ ಮೃತರಾಗಿ, 200 ಜನರು ಗಾಯಗೊಂಡಿದ್ದರು.