ಬೊಜ್ಜಿಗಿಂತಲೂ ದೊಡ್ಡ ಹೊಟ್ಟೆ ಸಖತ್ ಡೇಂಜರ್!
Belly fat in men
ಅವರಿಗೆ ಹೊಟ್ಟೆಯೇ ದೊಡ್ಡ ಭಾರ. ಬೊಜ್ಜಿನ ದೇಹವಿಲ್ಲದಿದ್ದರೂ ಹೊಟ್ಟೆ ದೊಡ್ಡದಾಗಿರುತ್ತದೆ. ಅಂತಹ ಹೊಟ್ಟೆ ಹೊತ್ತು ಓಡಾಡುವುದೇ ದೊಡ್ಡ ಸಮಸ್ಯೆ. ಇಂತಹ ದೊಡ್ಡ ಹೊಟ್ಟೆ ಇಟ್ಟುಕೊಂಡಿರುವುದು ಬೊಜ್ಜಿಗಿಂತಲೂ
ಡೇಂಜರ್ ಅಂತ ಸಮೀಕ್ಷೆಯೊಂದು ಹೇಳಿದೆ. ಈ ಸಮೀಕ್ಷೆಗಾಗಿ 15, 184 ಮಂದಿಯನ್ನು ಸಂದರ್ಶಿಸಲಾಗಿದ್ದು, 14 ವರ್ಷಗಳ ಕಾಲ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ಪ್ರಕಾರ ದೊಡ್ಡ ಹೊಟ್ಟೆ ಹೊಂದಿರುವವರಲ್ಲಿ ಪುರುಷರೇ ಹೆಚ್ಚಿದ್ದಾರೆ. ಮಹಿಳೆಯರು ಶೇ.40ರಷ್ಟು ಕಡಿಮೆ ಇದ್ದಾರೆ.
ದೇಹದ ಅಂಗಾಂಗಗಳಲ್ಲಿ ಕೊಬ್ಬು ಶೇಖರಣೆ ಆಗುವುದರಿಂದ ಹೊಟ್ಟೆ ದೊಡ್ಡದಾಗಲು ಕಾರಣವಾಗುತ್ತದೆ. ವ್ಯಕ್ತಿಯ ಬೊಜ್ಜಿನ ಸಮಸ್ಯೆಗಿಂತಲೂ ಇದು ಅಪಾಯಕಾರಿಯಾಗಿದೆ. ಸಮೀಕ್ಷೆ ಪ್ರಕಾರ 45 ವರ್ಷ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಈ ದೊಡ್ಡ ಹೊಟ್ಟೆ ಹೆ ಚ್ಚಾಗಿದೆಯಂತೆ. ದೊಡ್ಡ ಹೊಟ್ಟೆ ಮಧುಮೇಹಕ್ಕೂ ಕಾರಣವಾಗುತ್ತಿದೆ ಎಂದು ಹೇಳಲಾಗಿದೆ. ಇದಕ್ಕಾಗಿ ದೊಡ್ಡ ಹೊಟ್ಟೆ ಹೊಂದಿರುವವರು ಕೂಡಲೇ ಆರೋಗ್ಯಕರ ಆಹಾರ ಕ್ರಮ ರೂಢಿಸಿಕೊಳ್ಳಬೇಕು. ತೂಕದಲ್ಲಿ ನಿಯಂತ್ರಣ, ವ್ಯಾಯಾಮ ಮಾಡಬೇಕು. ಕೊಬ್ಬಿನ ಸಮಸ್ಯೆ ವಿಪರೀತವಾದರೆ, ಹೃದಯ ಸಮಸ್ಯೆ ಹೆಚ್ಚಾಗಿರುವುದು
ಮತ್ತು ಅದರಿಂದಲೇ ಸಾವು ಬರುವುದೂ ಸಮೀಕ್ಷೆಯಲ್ಲಿ ದೃಢ ಪಟ್ಟಿದೆ. ಆದ್ದರಿಂದ ದೊಡ್ಡ ಹೊಟ್ಟೆಯಿದ್ದವರು ಇಳಿಸುವ ಬಗ್ಗೆ ಆಲೋಚನೆ ಮಾಡಬೇಕು ಎಂದು ಸಮೀಕ್ಷೆ ಕಿವಿಮಾತು ಹೇಳಿದೆ.
ಫಲಿತಗಳು...
*ದೊಡ್ಡ ಹೊಟ್ಟೆಯಿಂದ ಮಧುಮೇಹ, ಹೃದಯದ ಕಾಯಿಲೆಗೆ ಆಹ್ವಾನ
*ಹೊಟ್ಟೆಯ ದೊಡ್ಡದಾದರೆ ಆರೋಗ್ಯಕ್ಕೆ ಪೆಟ್ಟು!
*45 ವರ್ಷಗಳ ಮೇಲ್ಪಟ್ಟ ವ್ಯಕ್ತಿಗಳಲ್ಲೇ ದೊಡ್ಡ ಹೊಟ್ಟೆ ಸಮಸ್ಯೆ: ಸಮೀಕ್ಷೆಯಲ್ಲಿ ಬಹಿರಂಗ
*ದೊಡ್ಡ ಹೊಟ್ಟೆ ಮಧುಮೇಹಕ್ಕೂ ಕಾರಣ