ಮೊಬೈಲ್ ಬಳಕೆ ಹೆಚ್ಚಾದ್ರೆ ಸಂಬಂಧ ಢಮಾರ್!
ಈಗ ಎಲ್ಲರ ಕೈಲೂ ಸ್ಮಾರ್ಟ್ ಫೋನ್.. ಸೆಕೆಂಡ್‌ಗೆ ಒಂದು ಬಾರಿ ಟಿನ್ ಟಿನ್ ಅಂತ ಮೆಸೇಜು. ಊಟ, ತಿಂಡಿಗೆ ಟೈಮಿಲ್ಲ. ಕೈಲಿ ಫೋನ್ ನೋಡ್ತಾನೇ ಇರ್ಬೇಕು. ಫೋನ್ ಕೈಲಿದ್ರೆ, ಜಗತ್ತಲ್ಲಿ ಏನಾಗುತ್ತೆ ಅಂತಾನೇ ಗೊತ್ತಾಗಲ್ಲ ಅನ್ನೋ ಪರಿಸ್ಥಿತಿ. ಹೀಗೆ ಮೊಬೈಲ್ ಅತಿಯಾದ ಬಳಕೆಯಿಂದಾಗಿ ಸಂಬಂಧಗಳಿಗೆ ಸಂಚರಕಾರ ಗ್ಯಾರೆಂಟಿ ಅಂತ ಸಮೀಕ್ಷೆಯೊಂದು ಹೇಳಿದೆ.
ನಿತ್ಯ ಲೆಕ್ಕಕ್ಕಿಂತ ಹೆಚ್ಚು ಮೊಬೈಲ್ ಬಳಸೋದ್ರಿಂದ ಪ್ರಮುಖವಾಗಿ ದಂಪತಿ ಮಧ್ಯೆ ವಿರಸ ಉಂಟಾಗಬಹುದು ಎನ್ನಲಾಗಿದೆ. ಸಮೀಕ್ಷೆಯಲ್ಲಿ ಶೇ.57ರಷ್ಟು ಮಂದಿ ತಮ್ಮ ಗಮನ ಪ್ರೇಮಿ ಅಥವಾ ಸಂಗಾತಿ ಇರುವಾಗಲೂ ಫೋನ್‌ಗೆ ಹೆಚ್ಚಿರುತ್ತದೆ ಎಂದು ಹೇಳಿದ್ದಾರೆ.
ಇನ್ನು ಶೇ.60ರಷ್ಟು ಮಂದಿ ತಮ್ಮ ಮೊದಲ ಡೇಟಿಂಗ್ ವೇಳೆ ಸಂಗಾತಿ ಗಮನ ಫೋನ್‌ನಲ್ಲೇ ಇತ್ತು ಎಂದು ದೂರಿದ್ದಾರೆ. ಸದಾ ಮೊಬೈಲ್‌ನಲ್ಲೇ ಬ್ಯುಸಿಯಾಗಿರುವುದರಿಂದ ಸಂಗಾತಿಗೆ ತನ್ನ ಬಗ್ಗೆ ಗಮನ ಇಲ್ಲ ಎಂಬ ಭಾವನೆ ಮೂಡಬಹುದು.
ಕ್ರಮೇಣ ಇದು ಸಂಬಂಧದಲ್ಲಿ ಬಿರುಕಿಗೆ ಕಾರಣವಾಗುತ್ತದೆ. ಆದ್ದರಿಂದ ಆದಷ್ಟೂ ಮೊಬೈಲ್‌ನಿಂದ ದೂರವಿರಿ, ಸಾಮಾಜಿಕ ಜಾಲತಾಣ ಬೇಕಾದಷ್ಟೇ ಬಳಕೆ ಮಾಡಿ ಎಂದು ಸಮೀಕ್ಷಕರು ಕಿವಿಮಾತು
ಹೇಳಿದ್ದಾರೆ.