• ಮುಖಪುಟ
  • ಸುದ್ದಿಗಳು
  • ರಾಜ್ಯ
  • ಓಟಿನ ಬೇಟೆ
  • ರಾಷ್ಟ್ರೀಯ
  • ಜಗತ್ತು
  • ಕ್ರೀಡೆ
  • ವಾಣಿಜ್ಯ
  • ಹೊರನಾಡು ಕನ್ನಡಿಗ
  • ನಿಮ್ಮ ಜಿಲ್ಲೆ
  • ಬೆಂಗಳೂರು ನಗರ
  • ಬೆಂಗಳೂರು ಗ್ರಾಮಾಂತರ
  • ಬೆಳಗಾವಿ
  • ಬಳ್ಳಾರಿ
  • ಬೀದರ
  • ಬಾಗಲಕೋಟೆ
  • ವಿಜಯಪುರ
  • ಚಾಮರಾಜನಗರ
  • ಚಿಕ್ಕಮಗಳೂರು
  • ಚಿಕ್ಕಬಳ್ಳಾಪುರ
  • ಚಿತ್ರದುರ್ಗ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ಗದಗ
  • ಕಲುಬುರಗಿ
  • ಹಾಸನ
  • ಹಾವೇರಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಮಂಡ್ಯ
  • ಮೈಸೂರು
  • ರಾಮನಗರ
  • ರಾಯಚೂರು
  • ಶಿವಮೊಗ್ಗ
  • ತುಮಕೂರು
  • ಉಡುಪಿ
  • ಉತ್ತರ ಕನ್ನಡ
  • ಯಾದಗಿರಿ
  • ಸುದಿನ
  • ಸುದಿನ ಆಯ್ಕೆ
  • ಪದಾರ್ಥ ಚಿಂತಾಮಣಿ
  • ಫ್ಯೂಷನ್ - ಪ್ರವಾಸ - ಮನರಂಜನೆ
  • ಯೋಗಕ್ಷೇಮ
  • ನಿಮ್ಮ ಊರು-ನಿಮ್ಮ ಧ್ವನಿ
  • ಎಜುಗೈಡ್
  • ಕರಾವಳಿ
  • ಮಂಗಳೂರು
  • ಪುತ್ತೂರು-ಬೆಳ್ತಂಗಡಿ
  • ಉಡುಪಿ
  • ಕುಂದಾಪುರ
  • ಕಾಸರಗೋಡು-ಮಡಿಕೇರಿ
  • ಸಿನೆಮಾ
  • ಬಾಲ್ಕನಿ-ಸ್ಯಾಂಡಲ್‌ವುಡ್‌ ಸುದ್ದಿ
  • ಬಾಲಿವುಡ್‌ ವಾರ್ತೆಗಳು
  • ಸಿನೆಪ್ಲೆಕ್ಸ್ -ಚಿತ್ರ ವಿಮರ್ಶೆ
  • ಸಂದರ್ಶನಗಳು
  • ಚಿತ್ರತಾರೆಗಳು
  • ಸಿನಿಮಾ ಗ್ಯಾಲರಿ
  • ವೈವಿಧ್ಯ
  • ನಗೆ ಹನಿ
  • ಕಿಚನ್ ರೂಂ
  • ಆರೋಗ್ಯ
  • ಫ್ಯಾಶನ್
  • ಪ್ರವಾಸ
  • ಅಂಕಣಗಳು
  • ವೆಬ್ ಫೋಕಸ್
  • ನೆಲದ ನಾಡಿ
  • ಕಾಸು ಕುಡಿಕೆ
  • ಚಕಿತ ಚಿತ್ತ
  • ಅಭಿಮತ
  • ವಿಐಪಿ ಕಾಲಂ
  • ದಾರಿ ದೀಪ
  • ಭಾವುಕ ಪ್ರಬುದ್ಧತೆ
  • ವಿಶೇಷ
  • ರಾಜಾಂಗಣ
  • ಮಾಡರ್ನ್ ಆಧ್ಯಾತ್ಮ
  • ರಾಜನೀತಿ
  • ನೇರಾ ನೇರ
  • ನಗರಮುಖಿ
  • ಪುರವಣಿಗಳು
  • ಐಸಿರಿ
  • ಜೋಶ್
  • ಅವಳು
  • ಚಿನ್ನಾರಿ
  • ಸುಚಿತ್ರಾ
  • ಐ ಲವ್ ಬೆಂಗಳೂರು
  • ಬಹುಮುಖಿ
  • ಸಾಪ್ತಾಹಿಕ ಸಂಪದ
  • ಮಹಿಳಾ ಸಂಪದ
  • ಯುವ ಸಂಪದ
  • ಆರೋಗ್ಯವಾಣಿ
  • ಕಲಾವಿಹಾರ
  • ಶಿಕ್ಷಣ ದರ್ಪಣ
  • ಜ್ಯೋತಿಷ್ಯ
  • ಇಂದಿನ ಪಂಚಾಂಗ
  • ದಿನ ಭವಿಷ್ಯ
  • ವಾರ ಭವಿಷ್ಯ
  • ವರ್ಷ ಭವಿಷ್ಯ
  • ವಾಸ್ತು
  • ಗ್ಯಾಲರಿ
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಪ್ರಕೃತಿ
  • ವೈವಿಧ್ಯ
  • ಸಿನಿಮಾ ಗ್ಯಾಲರಿ
  • ಕ್ರೀಡೆ
  • ಸುದಿನ
  • ವಿಡಿಯೊ
3'

ನಮ್ಮ ಎಲ್ಲ ನಗರಗಳೂ ದೀರ್ಘಾಯುಷಿಗಳಾಗಲಿ

ಅರವಿಂದ ನಾವಡ, Team Udayavani, Mar 10, 2018, 6:00 AM IST

ನಾನು ಇರುವ ಸ್ಥಳ ಸ್ವತ್ಛವಾಗಿಟ್ಟು ಕೊಳ್ಳುವುದು ನನ್ನ ಹೊಣೆಗಾರಿಕೆಯೂ ಹೌದು ಎಂಬ ಅರಿವು. ಹಾಗೆಯೇ ನಾವೆಲ್ಲರೂ ಬಳಸುವ ಸಾರ್ವಜನಿಕ ಸ್ಥಳಗಳ ಮರ್ಯಾದೆ ಕಾಪಾಡಬೇಕು ಎಂಬ ಬದ್ಧತೆ, ರಸ್ತೆ ಎಂಬುದು ನನಗಷ್ಟೇ ಅಲ್ಲ, ಉಳಿದವರಿಗೂ ಸಹ ಎಂಬ ಸಾಮಾನ್ಯ ಜ್ಞಾನ ಎಲ್ಲವೂ ನಾಗರಿಕ ಪ್ರಜ್ಞೆಯ ಭಾಗಗಳೇ. ಇದು ಕೇವಲ ನಗರಗಳಿಗಷ್ಟೇ ಸೀಮಿತವಲ್ಲ. ಆಯಾ ಊರಿನ ನಾಗರಿಕನ ಪ್ರಜ್ಞೆಯ ಭಾಗ. 

ನಾವೆಲ್ಲ ಸಣ್ಣವರಿದ್ದಾಗಿನಿಂದಲೂ ಕೇಳಿರಬಹುದಾದ ಕೆಲವು ಉದಾಹರಣೆಗಳಿವೆ. ಹಳ್ಳಿಯಿಂದಲೋ, ಆಗಿನ ಪುಟ್ಟ ಪಟ್ಟಣ ದಿಂದಲೋ ಅಮೆರಿಕಕ್ಕೋ, ಇಂಗ್ಲೆಂಡ್‌ಗೊà ಹೋದವನು ವಾಪಸು ತನ್ನೂರಿಗೆ ಬಂದಾಗ ಇಡೀ ಊರಿಗೇ ಊರೇ ಅವನ ಮಾತುಗಳಿಗೆ ಕಿವಿಯಾಗುತ್ತಿತ್ತು; ಕುತೂಹಲದ ಕಣ್ಣುಗಳಾಗುತ್ತಿದ್ದವು. ಅವನು ತಾನು ಅಲ್ಲಿ ಕಂಡ ಒಂದೊಂದೇ ಸಂಗತಿಯನ್ನು ಇಲ್ಲಿನ ಸಂಗತಿ ಯೊಂದಿಗೆ ಹೋಲಿಸಿ ಪಟ್ಟಿ ಮಾಡಿ ಹೇಳುತ್ತಿದ್ದ. ಅವುಗಳನ್ನೆಲ್ಲಾ ಕೇಳಿ ಈ ಊರೆಂಬ ಕಿವಿ-ಕಣ್ಣು ಅಚ್ಚರಿ ವ್ಯಕ್ತಪಡಿಸುತ್ತಾ ನಿಲ್ಲುತ್ತಿದ್ದವು. ಒಂದು ಕ್ಷಣವೇನು, ಹತ್ತಾರು ಕ್ಷಣ ಆ ಲೋಕ ಸ್ತಬ್ಧ. 

ಬಳಿಕ ವಾಸ್ತವಕ್ಕೆ ಬಂದರೆ ನಮ್ಮ ಜಗತ್ತಿನೊಂದಿಗೆ ಹೋಲಿಕೆ. "ಸಾಧ್ಯವೇ ಇಲ್ಲ', "ನಮ್ಮಲ್ಲಿ... ನೆನಪು ಮಾಡಿಕೊಳ್ಳಲೇಬೇಡಿ' ಎಂದು ಹೇಳುವವರು ಸುಮ್ಮನಿದ್ದರು. "ನಿಜಕ್ಕೂ ಎಷ್ಟೊಂದು ಸಂಸ್ಕಾರ ವಂತರು?' ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸುವವರು ಹಲವರಿದ್ದರು. "ನಮ್ಮಲ್ಲೂ ಬರಬೇಕು ಕಣ್ರೀ ಅಂಥದ್ದೇ ಪದ್ಧತಿ' ಎಂದು ಹೇಳು ವವರ ಸಂಖ್ಯೆಯೂ ಸಾಕಷ್ಟಿರುತ್ತಿತ್ತು. ಆದರೆ ಅವರ ಬಯಕೆ ಸ್ವಲ್ಪ ಕ್ಷೀಣ ದನಿಯಲ್ಲಿರುತ್ತಿತ್ತು. ಈ ಬಗ್ಗೆ ಯಾವುದೇ ಅನುಮಾನಗಳೂ ಇಲ್ಲ.

ಅಂಥದ್ದೇನು ಅವು?

ಇಂಗ್ಲೆಂಡ್‌ನ‌ಲ್ಲಿ ಯಾರೇ ತಮ್ಮ ನಾಯಿಯನ್ನು ವಾಯು ವಿಹಾರಕ್ಕೆ ಕರೆದುಕೊಂಡು ಹೋದರೆ ಜತೆಗೇ ಸ್ವಲ್ಪ ಕಾಗದವನ್ನೂ ಕೊಂಡೊ ಯ್ಯುತ್ತಾರೆ. ಒಂದು ವೇಳೆ ನಾಯಿ ಸಾರ್ವಜನಿಕ ಸ್ಥಳದಲ್ಲಿ ಮಲ ವಿಸರ್ಜಿಸಿದರೆ ಮರುಕ್ಷಣವೇ ನಾಯಿಯೊಡೆಯ/ಒಡತಿ ತಾನು ತಂದಿದ್ದ ಕಾಗದದಲ್ಲಿ ಸಂಗ್ರಹಿಸಿ ಸ್ವತ್ಛಗೊಳಿಸುತ್ತಾಳೆ. ಒಂದು ಕ್ಷಣವೂ ತಡಮಾಡುವುದಿಲ್ಲ. ಎರಡು ಬಾರಿ ಯೋಚಿಸುವುದಿಲ್ಲ.

ಅಮೆರಿಕದಲ್ಲಿ ಯಾರೂ ಕಸವನ್ನು ಎಲ್ಲೆಂದರಲ್ಲಿ ಬಿಸಾಡುವುದಿಲ್ಲ. ನಿರ್ದಿಷ್ಟ ಜಾಗದಲ್ಲಿ ಇರಿಸಲಾದ ಕಸದ ಬುಟ್ಟಿಗೇ ಎಸೆಯುತ್ತಾರೆ. ಶಿಸ್ತು ಎಂದರೆ ಅದು.

ರಸ್ತೆಯಲ್ಲಿನ ಜೀಬ್ರಾ ಕ್ರಾಸ್‌ಗೆ ಮರ್ಯಾದೆ ಸಿಗುವುದು ಕೇವಲ ಹೊರದೇಶಗಳಲ್ಲಿ. ಅಲ್ಲಿ ಏನಿದ್ದರೂ ಪಾದಚಾರಿಗಳಿಗೆ ಮೊದಲ ಮರ್ಯಾದೆ. ಒಂದು ವೇಳೆ ಪಾದಚಾರಿ ಜೀಬ್ರಾ ಲೈನ್‌ ಕ್ರಾಸಿಂಗ್‌ ಮಾಡುತ್ತಿದ್ದರೆ ಯಾರೇ ಆಗಲಿ ವಾಹನವನ್ನು ನಿಲ್ಲಿಸಿ ಕಾಯುತ್ತಾರೆ. 

"ನೋಡಿ, ಇತ್ತೀಚೆಗಷ್ಟೇ ಅಮೆರಿಕದಲ್ಲಿ ನಾನಾ ಸ್ಥಳಗಳಿಗೆ ಸುಮಾರು 600 ಕಿ.ಮೀ ಕ್ರಮಿಸಿದೆ. ನಿಮಗೆ ಅಚ್ಚರಿ ಯಾಗಬಹುದು. ಒಂದು ಬಾರಿಯೂ ಒಂದು ಹಾರ್ನ್ ಕೇಳಿಸಲಿಲ್ಲ'.

ಇಂಥ ಹಲವು ಸಂಗತಿಗಳಿವೆ ಹೇಳಲಿಕ್ಕೆ. ಎಲ್ಲವೂ ಕೇಳಿದ್ದು. ಈ ಹಾರ್ನ್ನ ಕಥೆ ಹಲವು ವರ್ಷಗಳಿಂದ ಕೇಳುತ್ತಿರುವಂಥದ್ದು. 

ಇದೇ ನಾಗರಿಕ ಪ್ರಜ್ಞೆಯಾ?

ಇದು ಸಿವಿಕ್‌ ಸೆನ್ಸ್‌ನ ಭಾಗ. ನಾನು ಇರುವ ಸ್ಥಳ ಸ್ವತ್ಛವಾಗಿಟ್ಟುಕೊಳ್ಳುವುದು ನನ್ನ ಹೊಣೆಗಾರಿಕೆಯೂ ಹೌದು ಎಂಬ ಅರಿವು. ಹಾಗೆಯೇ ನಾವೆಲ್ಲರೂ ಬಳಸುವ ಸಾರ್ವಜನಿಕ ಸ್ಥಳಗಳ ಮರ್ಯಾದೆ ಕಾಪಾಡಬೇಕು ಎಂಬ ಬದ್ಧತೆ, ರಸ್ತೆ ಎಂಬುದು ನನಗಷ್ಟೇ ಅಲ್ಲ, ಉಳಿದವರಿಗೂ ಸಹ ಎಂಬ ಸಾಮಾನ್ಯ ಜ್ಞಾನ ಎಲ್ಲವೂ ನಾಗರಿಕ ಪ್ರಜ್ಞೆಯ ಭಾಗಗಳೇ. ಇದು ಕೇವಲ ನಗರಗಳಿಗಷ್ಟೇ ಸೀಮಿತವಲ್ಲ. ಆಯಾ ಊರಿನ ನಾಗರಿಕನ ಪ್ರಜ್ಞೆಯ ಭಾಗ. ಈಗ ನಮ್ಮ ನಗರಗಳಲ್ಲಿ ಒಮ್ಮೆ ಓಡಾಡಿಕೊಂಡು ಬರೋಣ. ಎಷ್ಟು ವಿಚಿತ್ರವಾಗಿರಬಹುದು ಎಂದು ತಿಳಿಯೋಣ. 

ಬೆಂಗಳೂರಿನ ಒಂದು ಜನನಿಬಿಡ ರಸ್ತೆಯಲ್ಲಿ ನಡೆಯುತ್ತಾ ಹೋಗೋಣ. ನಾವು ರಸ್ತೆಯ ಬದಿಯಲ್ಲೇ ನಡೆಯುತ್ತಿದ್ದೇವೆ. ದೂರ ದಲ್ಲಿ ಕಾಣುವವರಿಗೆ ನಾವು ರಸ್ತೆಯ ಮಧ್ಯೆ ಇದ್ದಂತೆ ತೋರುತ್ತದೆ. ಅದಕ್ಕೂ ಕಾರಣವಿದೆ, ನಮ್ಮ ಫ‌ುಟ್‌ಪಾತ್‌ಗಳು ನಡೆಯುವಷ್ಟು ನಂಬಿಕಸ್ಥವಲ್ಲ. ಯಾಕೆಂದರೆ ಯಾವಾಗಲಾದರೂ ಕುಸಿಯಬಹುದು, ಇಲ್ಲವೇ ಥಟ್ಟನೆ ಗುಂಡಿ ಬಂದು ನಾವು ಬಿದ್ದು ಬಿಡಬಹುದು.ಇಂಥ ಸಂಭವನೀಯತೆಗಳೇ ತುಂಬಿಕೊಂಡಿವೆ. ಸರಿ, ನಡೆದು ಹೋಗುತ್ತಿ ರುವ ನಮಗೆ ಅರ್ಧ ಕಿ.ಮೀ ದೂರದಿಂದಲೇ ಒಬ್ಬ ದ್ವಿಚಕ್ರ ವಾಹನ ಸವಾರ ಹಾರ್ನ್ ಹಾಕಿಕೊಳ್ಳುತ್ತಾ ಬರುತ್ತಾನೆ. ನಾವು ಸ್ವಲ್ಪ ಬದಿಗೆ ಸರಿದರೂ ಅವನಿಗೆ ಸಾಕಾಗದು. ಹಾಗೆಯೇ ಚತುಷcಕ್ರ ವಾಹನ ದವನೂ ತನ್ನ ಹಾರ್ನ್ನ ಸಾಮರ್ಥ್ಯವನ್ನು ತೋರಿಸುತ್ತಾನೆ. ಇದರಿಂದ ರಸ್ತೆಯಲ್ಲಿ ನಡೆದು ಹೋಗುವ ನಾವು ಸ್ತಬ್ಧಗೊಳ್ಳುತ್ತೇವೆ.

ಮತ್ತೂಂದು ನಗರವನ್ನು ಆಯ್ಕೆ ಮಾಡಿಕೊಳ್ಳೋಣ. ಸಣ್ಣದೊಂದು ವೃತ್ತ. ಇನ್ನೂ ಇಲ್ಲಿಗೆ ಟ್ರಾಫಿಕ್‌ ಸಿಗ್ನಲ್‌ ಲೈಟ್‌ಗಳು ಬಂದಿಲ್ಲ. ಹಾಗಾಗಿ ಸಂಚಾರಿ ಪೇದೆಯೊಬ್ಬರು ಜನದಟ್ಟಣೆಯ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಉಳಿದ ಅವಧಿಯಲ್ಲಿ ಟ್ರಾಫಿಕ್‌ ವಾರ್ಡನ್‌. ನಾವು ವಾಹನಗಳಲ್ಲಿ ಹೋಗುತ್ತಿದ್ದೇವೆ. ಎದುರಿನ ಟ್ರಾಫಿಕ್‌ ವಾರ್ಡನ್‌ ನಿಲ್ಲುವಂತೆ ಸಂಕೇತ ಮಾಡುತ್ತಾನೆ. ನಾವು ಅವನು ಸಂಕೇತವನ್ನೂ ಲೆಕ್ಕಿಸದೇ ಅಕ್ಕಪಕ್ಕ ನೋಡಿಕೊಂಡು ನುಗ್ಗುತ್ತೇವೆ. ಯಾಕೆಂದರೆ, ಅವನು ಟ್ರಾಫಿಕ್‌ ವಾರ್ಡನ್‌. ದಂಡ ಹಾಕುವ ಟ್ರಾಫಿಕ್‌ ಪೊಲೀಸನಲ್ಲ (ಅವರನ್ನೂ ಕ್ಯಾರೇ ಮಾಡದವರೂ ಇದ್ದಾರೆಂಬುದು ಬೇರೆ ಮಾತು).

ಅದೇ ಸರ್ಕಲ್‌ನಲ್ಲಿ ರಸ್ತೆ ದಾಟಲೆಂದು ಜನರು ಕಾಯುತ್ತಿದ್ದಾರೆ. ವಿವಿಧ ವಾಹನಗಳಲ್ಲಿರುವ ನಾವು ದಾಟುವ ತರಾತುರಿಯಲ್ಲೇ ಮುಳುಗಿರುತ್ತೇವೆ. ನಮ್ಮ ದೃಷ್ಟಿಯಲ್ಲಿ ಅವರಿಗೇನು, ಇಲ್ಲೇ ಪೇಟೆ ಯಲ್ಲೇ ಇರುವವರು. ನಮಗೆ ಹಾಗಲ್ಲ, ಬಹುದೂರ ಹೋಗಬೇಕಿದೆ ಎಂದುಕೊಳ್ಳುತ್ತೇವೆ. ಇನ್ನೂ ಕೆಲವು ಬಾರಿ, ದೊಡ್ಡ ವಾಹನಗಳಿಗೆ ರಸ್ತೆ ಇರುವುದು. ಅವರು ಬೇಕಾದರೆ ಸರ್ವೀಸ್‌ ರಸ್ತೆಯಲ್ಲೋ, ಸ್ಕೈ ವಾಕ್‌ನಲ್ಲೋ ಬರಲಿ ಎಂದು ಬಯಸುತ್ತೇವೆ. ಇದರೊಂದಿಗೆ ನಮ್ಮ ಹಾರ್ನ್ ಗಳ ಪ್ರೀತಿಯ ಬಗೆಯನ್ನು ಹೇಳಲಿಕ್ಕೆ ಸಾವಿರ ಪ್ರಸಂಗಗಳಿವೆ. ಕಾರುಗಳಲ್ಲಿ ದೊಡ್ಡದಾಗಿ ಸಂಗೀತ ಹಾಕಿಕೊಂಡು ಕಾರುಗಳೇ ಕುಣಿಯುತ್ತಾ ಸಾಗುವುದನ್ನು ಕಾಣುವುದಿದೆ.

ಇನ್ನು ಎಲ್ಲೆಂದರಲ್ಲಿ ಕಸ ಹಾಕುವುದು, ಉಗಿಯುವುದು, ಪಾನ್‌ ಬೀಡಾ ಅಗಿದ ರಸ ಹೊರಚೆಲ್ಲುವುದು, ಬಸ್‌ಗಳಿಂದ ಬಾಳೆಹಣ್ಣಿನ ಸಿಪ್ಪೆ, ಬಿಸ್ಕತ್‌ ಕವರ್‌, ತಿಂಡಿ ತಿಂದು ಕೈ ತೊಳೆದ ನೀರು...ಒಂದೇ ಎರಡೇ ಬೇಕಾದಷ್ಟು ಉದಾಹರಣೆಗಳಿವೆ ನಮ್ಮಲ್ಲಿ. 

ನಗರಗಳು ದೀರ್ಘಾಯುಷಿಗಳಾಗಲಿ

ಇವೆಲ್ಲವನ್ನೂ ನಾವು ನಮ್ಮೊಳಗೆ ರೂಢಿಸಿಕೊಳ್ಳುವುದು ಯಾವಾಗ ಎಂದು ಸದಾ ಎನ್ನಿಸುವುದಿದೆ. ಹಿಂದೆಯೂ ವಿದೇಶದಿಂದ ಬಂದವ ನಿಗೆ ನಾವೆಲ್ಲಾ ಕಿವಿಯಾಗುವಾಗ ಹೀಗೆ ಅನ್ನಿಸುತ್ತಿತ್ತು. ನಮ್ಮ ದೇಶದಲ್ಲಿ ಇವೆಲ್ಲ ಜಾರಿಯಾಗಲು ಇನ್ನೆಷ್ಟು ವರ್ಷಗಳು ಬೇಕೋ? ಎಂದು. ಆದರೆ ಈಗಿನ ಸ್ಥಿತಿ ಕಂಡರೆ ಶತಮಾನಗಳು ಬೇಕು ಎಂದೆನಿಸಲೂ ಬಹುದು. ಹೀಗೆ ಅನ್ನಿಸುವುದಕ್ಕೆ ನಮ್ಮ ನಗರಗಳೇ ಸ್ಪಷ್ಟ ಉದಾಹರಣೆ. 

ಎಷ್ಟು ವಿಚಿತ್ರವೆಂದರೆ ನಮ್ಮ ಪ್ರಜ್ಞೆಯ ಭಾಗ ಆಗಬೇಕಾಗಿದ್ದ ಹಲವು ಸಂಗತಿಗಳ ನಿರ್ವಹಣೆಗೇ ನಾವು ತೆರುವ ತೆರಿಗೆಯ ಬಹುತೇಕ ಭಾಗ ವ್ಯಯವಾಗುತ್ತಿದೆ. ನಮ್ಮ ಸ್ಥಳೀಯ ಸಂಸ್ಥೆಗಳ ಬಹುಪಾಲು ಖರ್ಚು ಇರುವುದು ಇಂಥ ಚಿಕ್ಕ ಚಿಕ್ಕ ಸಂಗತಿಗಳಿಗೇ ಎನ್ನುವುದು ಮರೆಯದಿರೋಣ. ಅಂದರೆ ನಾಗರಿಕ ಪ್ರಜ್ಞೆಯ ಕೊರತೆಯಿಂದ ಅಥವಾ ಅವಜ್ಞೆಯಿಂದ ಉದ್ಭವಿಸುವ ಪ್ರಮಾದಗಳಿಗೆ. ಇನ್ನು ಮೂಲ ಸೌಕರ್ಯಗಳಿಗೆ ಅನುದಾನ ವ್ಯಯ ಮಾಡುವ ಮಾತನ್ನು ಬಳಿಕ ಆಡೋಣ. 

ಗೆಳೆಯರೊಬ್ಬರು (ಸ್ಥಳೀಯ ಸಂಸ್ಥೆಯಲ್ಲಿದ್ದ ಅಧಿಕಾರಿ) ಒಮ್ಮೆ ಹೇಳಿದ್ದು ಇಲ್ಲಿ ಉಲ್ಲೇಖೀಸುವುದು ಒಳಿತು. ಈ ಮಾತು ಕೇವಲ ಬೆಂಗಳೂರಿಗೆ ಅನ್ವಯವಾಗುವುದಿಲ್ಲ. ಪ್ರತಿ ಊರಿಗೂ ಅನ್ವಯವಾಗು ವಂಥದ್ದು. ಎಲ್ಲ ನಾಗರಿಕರೂ ತಮ್ಮ ತಮ್ಮ ಮನೆಯಲ್ಲಿ ಉತ್ಪತ್ತಿ ಯಾಗುವ ಕಸವನ್ನು ಪ್ರಜ್ಞಾಪೂರ್ವಕವಾಗಿ ಕಡಿಮೆ ಮಾಡುವ ಪ್ರತಿಜ್ಞೆ ಸ್ವೀಕರಿಸಿದರೆ ನಗರಗಳ ತ್ಯಾಜ್ಯ ನಿರ್ವಹಣೆಯ ಹೊರೆ ಅರ್ಧ ಪಾಲು ಹಗುರಾಗುತ್ತದೆ. ಅದರಿಂದಾಗುವ ಲಾಭ ಎಷ್ಟೊಂದು ಗೊತ್ತೇ? ನಮ್ಮ ಭೂಮಿ, ಅಂತರ್ಜಲ, ತಾಜ್ಯ ವಿಲೇವಾರಿಗೆ ಮಾಡುವ ವೆಚ್ಚ, ಮಾನವ ದಿನಗಳು!

ಎಷ್ಟೊಂದು ಸರಳ ಉತ್ತರಗಳಿವೆ ದೊಡ್ಡ ಸಮಸ್ಯೆಗಳಿಗೆ ಎನ್ನಿಸು ವುದಿಲ್ಲವೇ? ನಾಗರಿಕ ಪ್ರಜ್ಞೆ ಅಥವಾ ನಗರ ಪ್ರಜ್ಞೆಯ ಲಾಭವನ್ನು ಪಡೆಯುವ ದಿನಗಳು ಹತ್ತಿರವಾಗಲಿ ಎಂಬುದು ಸದಾಶಯ. ಅದಕ್ಕೆ ನಾವೆಲ್ಲ ನಾಗರಿಕ ಪ್ರಜ್ಞೆಯೆಂದು ದೂರವಿಟ್ಟಿರುವ ಅಥವಾ ಆ್ಯಂಟಿಕ್‌ ಎಂಬಂತೆ ನೋಡುತ್ತಿರುವ ಆ ನಡವಳಿಕೆಗಳು ನಮ್ಮ ಪ್ರಜ್ಞೆಯ ಭಾಗವಾಗಿ ಸ್ವೀಕರಿಸಬೇಕು. ಅದು ನಮ್ಮ ನಗರಗಳನ್ನು ಬಹುದೂರ ನಡೆಸಬಲ್ಲದು. ನಗರಗಳಿಗೆ ಆಯುಷ್ಯ ತುಂಬುವುದೆಂದರೆ ಇದೇ. ಇದು ಯಾಗದಂತೆಯೇ ನಡೆಯಬೇಕು. ಆಗ ನಮ್ಮ ನಗರಗಳು ದೀರ್ಘಾಯುಷಿಗಳು.

Tags: 
ಸಾರ್ವಜನಿಕ ಸ್ಥಳ
ಸಾಮಾನ್ಯ ಜ್ಞಾನ
ವಾಯು ವಿಹಾರ
Public space
General Knowledge
  • NEXT ARTICLE
  • ಮುಖಪುಟ DOWNLOADED

  • ಸುದ್ದಿಗಳು

    • ಸುದ್ದಿಗಳು

    • ರಾಜ್ಯ DOWNLOADED

    • ಓಟಿನ ಬೇಟೆ DOWNLOADED

    • ರಾಷ್ಟ್ರೀಯ DOWNLOADED

    • ಜಗತ್ತು DOWNLOADED

    • ಕ್ರೀಡೆ DOWNLOADED

    • ವಾಣಿಜ್ಯ DOWNLOADED

    • ಹೊರನಾಡು ಕನ್ನಡಿಗ DOWNLOADED

  • ನಿಮ್ಮ ಜಿಲ್ಲೆ

    • ನಿಮ್ಮ ಜಿಲ್ಲೆ

    • ಬೆಂಗಳೂರು ನಗರ DOWNLOADED

    • ಬೆಂಗಳೂರು ಗ್ರಾಮಾಂತರ DOWNLOADED

    • ಬೆಳಗಾವಿ DOWNLOADED

    • ಬಳ್ಳಾರಿ DOWNLOADED

    • ಬೀದರ DOWNLOADED

    • ಬಾಗಲಕೋಟೆ DOWNLOADED

    • ವಿಜಯಪುರ DOWNLOADED

    • ಚಾಮರಾಜನಗರ DOWNLOADED

    • ಚಿಕ್ಕಮಗಳೂರು DOWNLOADED

    • ಚಿಕ್ಕಬಳ್ಳಾಪುರ DOWNLOADED

    • ಚಿತ್ರದುರ್ಗ DOWNLOADED

    • ದಕ್ಷಿಣ ಕನ್ನಡ DOWNLOADED

    • ದಾವಣಗೆರೆ DOWNLOADED

    • ಧಾರವಾಡ DOWNLOADED

    • ಗದಗ DOWNLOADED

    • ಕಲುಬುರಗಿ DOWNLOADED

    • ಹಾಸನ DOWNLOADED

    • ಹಾವೇರಿ DOWNLOADED

    • ಕೊಡಗು DOWNLOADED

    • ಕೊಪ್ಪಳ DOWNLOADED

    • ಕೋಲಾರ DOWNLOADED

    • ಮಂಡ್ಯ DOWNLOADED

    • ಮೈಸೂರು DOWNLOADED

    • ರಾಮನಗರ DOWNLOADED

    • ರಾಯಚೂರು DOWNLOADED

    • ಶಿವಮೊಗ್ಗ DOWNLOADED

    • ತುಮಕೂರು DOWNLOADED

    • ಉಡುಪಿ DOWNLOADED

    • ಉತ್ತರ ಕನ್ನಡ DOWNLOADED

    • ಯಾದಗಿರಿ DOWNLOADED

  • ಸುದಿನ

    • ಸುದಿನ

    • ಸುದಿನ ಆಯ್ಕೆ DOWNLOADED

    • ಪದಾರ್ಥ ಚಿಂತಾಮಣಿ DOWNLOADED

    • ಫ್ಯೂಷನ್ - ಪ್ರವಾಸ - ಮನರಂಜನೆ DOWNLOADED

    • ಯೋಗಕ್ಷೇಮ DOWNLOADED

    • ನಿಮ್ಮ ಊರು-ನಿಮ್ಮ ಧ್ವನಿ DOWNLOADED

    • ಎಜುಗೈಡ್ DOWNLOADED

  • ಕರಾವಳಿ

    • ಕರಾವಳಿ

    • ಮಂಗಳೂರು DOWNLOADED

    • ಪುತ್ತೂರು-ಬೆಳ್ತಂಗಡಿ DOWNLOADED

    • ಉಡುಪಿ DOWNLOADED

    • ಕುಂದಾಪುರ DOWNLOADED

    • ಕಾಸರಗೋಡು-ಮಡಿಕೇರಿ DOWNLOADED

  • ಸಿನೆಮಾ

    • ಸಿನೆಮಾ

    • ಬಾಲ್ಕನಿ-ಸ್ಯಾಂಡಲ್‌ವುಡ್‌ ಸುದ್ದಿ DOWNLOADED

    • ಬಾಲಿವುಡ್‌ ವಾರ್ತೆಗಳು DOWNLOADED

    • ಸಿನೆಪ್ಲೆಕ್ಸ್ -ಚಿತ್ರ ವಿಮರ್ಶೆ DOWNLOADED

    • ಸಂದರ್ಶನಗಳು DOWNLOADED

    • ಚಿತ್ರತಾರೆಗಳು DOWNLOADED

    • ಸಿನಿಮಾ ಗ್ಯಾಲರಿ DOWNLOADED

  • ವೈವಿಧ್ಯ

    • ವೈವಿಧ್ಯ

    • ನಗೆ ಹನಿ DOWNLOADED

    • ಕಿಚನ್ ರೂಂ DOWNLOADED

    • ಆರೋಗ್ಯ DOWNLOADED

    • ಫ್ಯಾಶನ್ DOWNLOADED

    • ಪ್ರವಾಸ DOWNLOADED

  • ಅಂಕಣಗಳು

    • ಅಂಕಣಗಳು

    • ವೆಬ್ ಫೋಕಸ್ DOWNLOADED

    • ನೆಲದ ನಾಡಿ DOWNLOADED

    • ಕಾಸು ಕುಡಿಕೆ DOWNLOADED

    • ಚಕಿತ ಚಿತ್ತ DOWNLOADED

    • ಅಭಿಮತ DOWNLOADED

    • ವಿಐಪಿ ಕಾಲಂ DOWNLOADED

    • ದಾರಿ ದೀಪ DOWNLOADED

    • ಭಾವುಕ ಪ್ರಬುದ್ಧತೆ DOWNLOADED

    • ವಿಶೇಷ DOWNLOADED

    • ರಾಜಾಂಗಣ DOWNLOADED

    • ಮಾಡರ್ನ್ ಆಧ್ಯಾತ್ಮ DOWNLOADED

    • ರಾಜನೀತಿ DOWNLOADED

    • ನೇರಾ ನೇರ DOWNLOADED

    • ನಗರಮುಖಿ DOWNLOADED

  • ಪುರವಣಿಗಳು

    • ಪುರವಣಿಗಳು

    • ಐಸಿರಿ DOWNLOADED

    • ಜೋಶ್ DOWNLOADED

    • ಅವಳು DOWNLOADED

    • ಚಿನ್ನಾರಿ DOWNLOADED

    • ಸುಚಿತ್ರಾ DOWNLOADED

    • ಐ ಲವ್ ಬೆಂಗಳೂರು DOWNLOADED

    • ಬಹುಮುಖಿ DOWNLOADED

    • ಸಾಪ್ತಾಹಿಕ ಸಂಪದ DOWNLOADED

    • ಮಹಿಳಾ ಸಂಪದ DOWNLOADED

    • ಯುವ ಸಂಪದ DOWNLOADED

    • ಆರೋಗ್ಯವಾಣಿ DOWNLOADED

    • ಕಲಾವಿಹಾರ DOWNLOADED

    • ಶಿಕ್ಷಣ ದರ್ಪಣ DOWNLOADED

  • ಜ್ಯೋತಿಷ್ಯ

    • ಜ್ಯೋತಿಷ್ಯ

    • ಇಂದಿನ ಪಂಚಾಂಗ DOWNLOADED

    • ದಿನ ಭವಿಷ್ಯ DOWNLOADED

    • ವಾರ ಭವಿಷ್ಯ DOWNLOADED

    • ವರ್ಷ ಭವಿಷ್ಯ DOWNLOADED

    • ವಾಸ್ತು DOWNLOADED

  • ಗ್ಯಾಲರಿ

    • ಗ್ಯಾಲರಿ

    • ರಾಜ್ಯ DOWNLOADED

    • ರಾಷ್ಟ್ರೀಯ DOWNLOADED

    • ವಿದೇಶ DOWNLOADED

    • ಪ್ರಕೃತಿ DOWNLOADED

    • ವೈವಿಧ್ಯ DOWNLOADED

    • ಸಿನಿಮಾ ಗ್ಯಾಲರಿ DOWNLOADED

    • ಕ್ರೀಡೆ DOWNLOADED

    • ಸುದಿನ DOWNLOADED

  • ವಿಡಿಯೊ DOWNLOADED

  • ePaper

  • Udayavani English Edition