• ಮುಖಪುಟ
  • ಸುದ್ದಿಗಳು
  • ರಾಜ್ಯ
  • ಓಟಿನ ಬೇಟೆ
  • ರಾಷ್ಟ್ರೀಯ
  • ಜಗತ್ತು
  • ಕ್ರೀಡೆ
  • ವಾಣಿಜ್ಯ
  • ಹೊರನಾಡು ಕನ್ನಡಿಗ
  • ನಿಮ್ಮ ಜಿಲ್ಲೆ
  • ಬೆಂಗಳೂರು ನಗರ
  • ಬೆಂಗಳೂರು ಗ್ರಾಮಾಂತರ
  • ಬೆಳಗಾವಿ
  • ಬಳ್ಳಾರಿ
  • ಬೀದರ
  • ಬಾಗಲಕೋಟೆ
  • ವಿಜಯಪುರ
  • ಚಾಮರಾಜನಗರ
  • ಚಿಕ್ಕಮಗಳೂರು
  • ಚಿಕ್ಕಬಳ್ಳಾಪುರ
  • ಚಿತ್ರದುರ್ಗ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ಗದಗ
  • ಕಲುಬುರಗಿ
  • ಹಾಸನ
  • ಹಾವೇರಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಮಂಡ್ಯ
  • ಮೈಸೂರು
  • ರಾಮನಗರ
  • ರಾಯಚೂರು
  • ಶಿವಮೊಗ್ಗ
  • ತುಮಕೂರು
  • ಉಡುಪಿ
  • ಉತ್ತರ ಕನ್ನಡ
  • ಯಾದಗಿರಿ
  • ಸುದಿನ
  • ಸುದಿನ ಆಯ್ಕೆ
  • ಪದಾರ್ಥ ಚಿಂತಾಮಣಿ
  • ಫ್ಯೂಷನ್ - ಪ್ರವಾಸ - ಮನರಂಜನೆ
  • ಯೋಗಕ್ಷೇಮ
  • ನಿಮ್ಮ ಊರು-ನಿಮ್ಮ ಧ್ವನಿ
  • ಎಜುಗೈಡ್
  • ಕರಾವಳಿ
  • ಮಂಗಳೂರು
  • ಪುತ್ತೂರು-ಬೆಳ್ತಂಗಡಿ
  • ಉಡುಪಿ
  • ಕುಂದಾಪುರ
  • ಕಾಸರಗೋಡು-ಮಡಿಕೇರಿ
  • ಸಿನೆಮಾ
  • ಬಾಲ್ಕನಿ-ಸ್ಯಾಂಡಲ್‌ವುಡ್‌ ಸುದ್ದಿ
  • ಬಾಲಿವುಡ್‌ ವಾರ್ತೆಗಳು
  • ಸಿನೆಪ್ಲೆಕ್ಸ್ -ಚಿತ್ರ ವಿಮರ್ಶೆ
  • ಸಂದರ್ಶನಗಳು
  • ಚಿತ್ರತಾರೆಗಳು
  • ಸಿನಿಮಾ ಗ್ಯಾಲರಿ
  • ವೈವಿಧ್ಯ
  • ನಗೆ ಹನಿ
  • ಕಿಚನ್ ರೂಂ
  • ಆರೋಗ್ಯ
  • ಫ್ಯಾಶನ್
  • ಪ್ರವಾಸ
  • ಅಂಕಣಗಳು
  • ವೆಬ್ ಫೋಕಸ್
  • ನೆಲದ ನಾಡಿ
  • ಕಾಸು ಕುಡಿಕೆ
  • ಚಕಿತ ಚಿತ್ತ
  • ಅಭಿಮತ
  • ವಿಐಪಿ ಕಾಲಂ
  • ದಾರಿ ದೀಪ
  • ಭಾವುಕ ಪ್ರಬುದ್ಧತೆ
  • ವಿಶೇಷ
  • ರಾಜಾಂಗಣ
  • ಮಾಡರ್ನ್ ಆಧ್ಯಾತ್ಮ
  • ರಾಜನೀತಿ
  • ನೇರಾ ನೇರ
  • ನಗರಮುಖಿ
  • ಪುರವಣಿಗಳು
  • ಐಸಿರಿ
  • ಜೋಶ್
  • ಅವಳು
  • ಚಿನ್ನಾರಿ
  • ಸುಚಿತ್ರಾ
  • ಐ ಲವ್ ಬೆಂಗಳೂರು
  • ಬಹುಮುಖಿ
  • ಸಾಪ್ತಾಹಿಕ ಸಂಪದ
  • ಮಹಿಳಾ ಸಂಪದ
  • ಯುವ ಸಂಪದ
  • ಆರೋಗ್ಯವಾಣಿ
  • ಕಲಾವಿಹಾರ
  • ಶಿಕ್ಷಣ ದರ್ಪಣ
  • ಜ್ಯೋತಿಷ್ಯ
  • ಇಂದಿನ ಪಂಚಾಂಗ
  • ದಿನ ಭವಿಷ್ಯ
  • ವಾರ ಭವಿಷ್ಯ
  • ವರ್ಷ ಭವಿಷ್ಯ
  • ವಾಸ್ತು
  • ಗ್ಯಾಲರಿ
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಪ್ರಕೃತಿ
  • ವೈವಿಧ್ಯ
  • ಸಿನಿಮಾ ಗ್ಯಾಲರಿ
  • ಕ್ರೀಡೆ
  • ಸುದಿನ
  • ವಿಡಿಯೊ
3'

ಆಶಿಶ್‌ "ನೆಹ್ರಾಜಿ' ಎಂಬ ಅದ್ಭುತ ಗೆಳೆಯ

ನನ್ನನ್ನು ಕೇಳುವುದಾದರೆ ಅವನು ನೀರಿನೊಳಗೂ ಮಾತನಾಡಬಲ್ಲ!
Team Udayavani, Nov 11, 2017, 4:20 PM IST

ಈ ಪಾಟಿ ಗಾಯಗಳು ಮತ್ತು ಸರ್ಜರಿಗಳ ಹೊರತಾಗಿಯೂ ಈ ವ್ಯಕ್ತಿ ತನ್ನ 38ನೇ ವರ್ಷದಲ್ಲಿ ಬೌಲಿಂಗ್‌ ಮಾಡಬಲ್ಲ ಎಂದಾದರೆ, 36 ವರ್ಷದ ನನಗೆ ಬ್ಯಾಟಿಂಗ್‌ ಮಾಡಲು ಏನು ಕಷ್ಟ ಎಂಬ ಪ್ರಶ್ನೆಯನ್ನು ಅನೇಕ ಬಾರಿ  ಕೇಳಿಕೊಂಡಿದ್ದೇನೆ. ಈ ಸಂಗತಿಯೇ ನನ್ನನ್ನು ಈಗಲೂ  ಕ್ರಿಕೆಟ್‌ ಆಡಲು ಹುರಿದುಂಬಿಸುವುದು.

ಆಶಿಶ್‌ ನೆಹ್ರಾ! 

ಮೊದಲನೆಯದಾಗಿ, ನನ್ನ ದೋಸ್ತ್ ಆಶು ಬಗ್ಗೆ ಹೇಳಬೇಕೆಂದರೆ, ಅವನು ಅತ್ಯಂತ ಪ್ರಾಮಾಣಿಕ, ಸ್ವತ್ಛ ಮನಸ್ಸಿನ‌ ಮನುಷ್ಯ. ಬಹುಶಃ 

ಪವಿತ್ರ ಗ್ರಂಥವೊಂದಕ್ಕೆ ಮಾತ್ರ ಆತನಿಗಿಂತ ಪ್ರಾಮಾಣಿಕವಾಗಿರಲು ಸಾಧ್ಯವಿದೆಯೇನೋ?! ನನಗೆ ಗೊತ್ತು. ಇದನ್ನೋದಿದ ಮೇಲೆ ನಿಮ್ಮ ತಲೆ ಗಿರ್‌ ಎಂದಿರಲಿಕ್ಕೂ ಸಾಕು, ಎಷ್ಟೋ ಜನರ ಹುಬ್ಬು ಮೇಲೇರಿರಬಹುದು. ಸತ್ಯವೇನೆಂದರೆ ಕೆಲವೊಮ್ಮೆ ನಾವೆಲ್ಲ ಜನರು ಮತ್ತು ಜೀವನದ ಬಗ್ಗೆ ಜಡ್ಜ್ ಮೆಂಟಲ್‌ ಆಗಿಬಿಡುತ್ತೇವೆ. ಅದರಲ್ಲೂ ಖ್ಯಾತನಾಮರ ವಿಷಯದಲ್ಲಂತೂ ಇದು ಹೆಚ್ಚು.

ಅವರನ್ನು ಹಲವಾರು ಮಾನದಂಡಗಳ ಮೇಲೆ ಜಡ್ಜ್ ಮಾಡಲಾಗುತ್ತದೆ. ಸತ್ಯವೇನೆಂದರೆ ಆಶು ಕೆಲವರ ವಿಷಯದಲ್ಲಿ ಬಹಳ ನೇರವಾಗಿ(ಇದ್ದದ್ದನ್ನು ಇದ್ದಂತೆ) ಮಾತನಾಡುತ್ತಿದ್ದ. ಇದರಿಂದ ಅವನು ತೊಂದರೆ ಅನುಭವಿಸಿದ. ಆದರೆ ನನ್ನ ಪಾಲಿಗಂತೂ ಆತ ಯಾವಾಗಲೂ ಆಶು ಅಥವಾ ನೆಹ್ರಾಜಿ ಎಂಬ ಪ್ರಾಮಾಣಿಕ ಮತ್ತು ಮೋಜಿನ ಗೆಳೆಯನಾಗಿರುತ್ತಾನೆ ಮತ್ತು ತನ್ನ ತಂಡವನ್ನು ಎಂದಿಗೂ ಬಿಟ್ಟುಕೊಡದ ವ್ಯಕ್ತಿಯಾಗಿಯೇ ಉಳಿಯುತ್ತಾನೆ.   

ನಿಂತಲ್ಲಿ ನಿಲ್ಲಂಗಿಲ್ಲ

ನಾನು ಆಶಿಶ್‌ ನೆಹ್ರಾನನ್ನು ಮೊದಲು ಭೇಟಿಯಾಗಿದ್ದು  ಅಂಡರ್‌ 19 ದಿನಗಳಲ್ಲಿ. ಆಗ ಅವನು ಭಾರತ ತಂಡಕ್ಕೆ ಆಯ್ಕೆಯಾಗಿದ್ದ. ಪಂದ್ಯಾ ವಳಿಯೊಂದರ ಸಮಯದಲ್ಲಿ ನಾನು ಹರ್ಭಜನ್‌ ಸಿಂಗ್‌ನನ್ನು ಭೇಟಿ ಮಾಡಲು ಅವನ ರೂಮ್‌ಗೆ ಹೋಗಿದ್ದೆ. ಆಗ ನನ್ನ ಕಣ್ಣಿಗೆ ಬಿದ್ದ ಆಶಿಶ್‌ ನೆಹ್ರಾ ಎಂಬ ಈ ತೆಳು ಕಾಯದ, ಎತ್ತರದ ವ್ಯಕ್ತಿ. (ಆಶಿಶ್‌ ಹರ್ಭಜನ್‌ನ ರೂಮ್‌ಮೆಟ್‌ ಆಗಿದ್ದ.). ಕೆಲವೇ ಕ್ಷಣಗಳಲ್ಲಿ ನನಗೆ ಈತನಿಗೆ ಒಂದು ಕಡೆ ನಿಂತಲ್ಲಿ ನಿಲ್ಲಲು ಬರುವುದಿಲ್ಲ ಎನ್ನುವುದು ತಿಳಿದು ಹೋಯಿತು.

ಬಿಸಿಲಿಗೆ ಕಾದು ಕೆಂಪಾದ ಛಾವಣಿಯ ಮೇಲೆ ಕಾಲಿಟ್ಟು ಜಿಗಿದಾಡುವ ಬೆಕ್ಕಿನಂತೆ ಆಡುತ್ತಿದ್ದ ಆಶು. ಒಂದು ಕ್ಷಣಕ್ಕೆ ಸುಮ್ಮನೆ ಕುಳಿತಿರುತ್ತಿದ್ದ, ಮರುಕ್ಷಣವೇ ಎದ್ದು ನಿಂತ ಮೈಕೈ ಸ್ಟ್ರೆಚ್‌ ಮಾಡುತ್ತಿದ್ದ ಇಲ್ಲವೇ ಮುಖ ಹಿಂಡುತ್ತಿದ್ದ ಅಥವಾ ಕಣ್ಣುಗಳನ್ನು ಮೇಲೆ ಕೆಳಗೆ ಮಾಡುತ್ತಿದ್ದ. ನನಗಂತೂ ಆತನ ವರ್ತನೆ ತೀರಾ ತಮಾಷೆಯೆನಿಸಿತು. ಯಾರಾದರೂ ಇವನ ಪ್ಯಾಂಟ್‌ನಲ್ಲಿ ಇರುವೆ ಬಿಟ್ಟಿದ್ದಾರಾ ಏನು ಕಥೆ ಎಂಬ ಯೋಚನೆ ಬಂತು!

ಮುಂದೆ ನಾವು ಭಾರತಕ್ಕಾಗಿ ಆಡಲು ಆರಂಭಿಸಿದಾಗ ನನಗೆ ಸ್ಪಷ್ಟವಾಗಿ ಹೋಯಿತು-ಈ ಮನುಷ್ಯನಿಗೆ ಒಂದು ಕಡೆ ನಿಂತಲ್ಲಿ ನಿಲ್ಲಲು ಆಗುವುದೇ ಇಲ್ಲ! ಆಶು ವಿಪರೀತ ಮಾತನಾಡುತ್ತಾನೆ. ಇದನ್ನು ನೋಡಿಯೇ ಸೌರವ್‌ ಗಂಗೂಲಿ ಅವನಿಗೆ ಪೋಪಟ್‌(ಗಿಳಿ) ಎಂಬ ಅಡ್ಡ ಹೆಸರಿಟ್ಟ. ನನ್ನನ್ನು ಕೇಳುವುದಾದರೆ ನೆಹ್ರಾಜಿ ನೀರಿನೊಳಗೂ ಮಾತನಾಡಬಲ್ಲ! 

ಅತಿ ಮಾತಷ್ಟೇ ಅಲ್ಲ, ಇದರ ಮೇಲೆ ಅತಿ ತಮಾಷೆಯ ವ್ಯಕ್ತಿತ್ವ ಅವನದ್ದು. ನಮ್ಮನ್ನು ನಗಿಸಲು ಆತ ಮಾತನಾಡಲೇಬೇಕೆಂದಿಲ್ಲ, ನನಗಂತೂ ಆತನ ಹಾವಭಾವ ನೋಡಿದರೆ ಸಾಕು ನಗು ಉಕ್ಕಿಬರುತ್ತದೆ. ಒಂದು ವೇಳೆ ನೀವು ಆಶಿಶ್‌ ನೆಹ್ರಾ ಜೊತೆ ಇದ್ದೀರಿ ಎಂದಾದರೆ ನಿಮ್ಮ ದಿನ ಕೆಟ್ಟದಾಗಿರಲು ಸಾಧ್ಯವೇ ಇಲ್ಲ. ನೀವು ನಕ್ಕೂ ನಕ್ಕು ಹೊಟ್ಟೆ ಹಿಡಿದುಕೊಂಡು ಕೆಳಕ್ಕೆ ಬೀಳುವಂತೆ ಮಾಡಬಲ್ಲ ಕ್ಷಮತೆ ಅವನಿಗಿದೆ. 

ನಮಗೆಲ್ಲ ಸ್ಫೂರ್ತಿ

ಒಂದು ವಿಷಯವನ್ನು ನಾನು ಖುದ್ದು ಆಶಿಶ್‌ ನೆಹ್ರಾನಿಂದಲೂ ಮುಚ್ಚಿಟ್ಟಿದ್ದೇನೆ. ಅದೇನೆಂದರೆ ನಾನು ಸೀಕ್ರೆಟ್‌ ಆಗಿ ಆತನಿಂದ ಪ್ರೇರಣೆ ಪಡೆದಿದ್ದೇನೆ. ಈ ಪಾಟಿ ಗಾಯಗಳು ಮತ್ತು ಸರ್ಜರಿಗಳ ಹೊರತಾಗಿಯೂ ಈ ವ್ಯಕ್ತಿ ತನ್ನ 38ನೇ ವರ್ಷದಲ್ಲಿ ಬೌಲಿಂಗ್‌ ಮಾಡಬಲ್ಲ ಎಂದಾದರೆ, 36 ವರ್ಷದ ನನಗೆ ಬ್ಯಾಟಿಂಗ್‌ ಮಾಡಲು ಏನು ಕಷ್ಟ ಎಂಬ ಪ್ರಶ್ನೆ ಕೇಳಿಕೊಂಡಿದ್ದೇನೆ. ಈ ಸಂಗತಿಯೇ ನನ್ನನ್ನು ಈಗಲೂ  ಕ್ರಿಕೆಟ್‌ ಆಡಲು ಹುರಿದುಂಬಿಸುವುದು. 

ಆಶುಗೆ  ಮೊಣಕೈ, ಸೊಂಟ, ಎರಡೂ ಮೊಣಕಾಲು, ಪಾದ, ಬೆರಳು ಸೇರಿದಂತೆ 11ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳಾಗಿವೆ. ಇದೆಲ್ಲದರ ಹೊರತಾಗಿಯೂ ಆತ ವರ್ಷಗಟ್ಟಲೇ ಕ್ರಿಕೆಟ್‌ ಆಡಿದ. ಇದರ ಹಿಂದೆ ಆತನ ಕಠಿಣ ಪರಿಶ್ರಮ ಮತ್ತು ಉತ್ತಮ ಪ್ರದರ್ಶನ ನೀಡಬೇಕೆಂಬ ಅದಮ್ಯ ಬಯಕೆ ಕೆಲಸ ಮಾಡುತ್ತಿತ್ತು. ನನಗೆ ನೆನಪಿದೆ, 2003ರ ವಿಶ್ವಕಪ್‌ ಪಂದ್ಯಾವಳಿಯ ವೇಳೆ ಆಶುನ ಹಿಮ್ಮಡಿ ಜೋರಾಗಿ ಉಳುಕಿಬಿಟ್ಟಿತ್ತು.

ಆತ ಇಂಗ್ಲೆಂಡ್‌ ಎದುರಿನ ಮುಂದಿನ ಪಂದ್ಯವಾಡುವ ಪರಿಸ್ಥಿತಿಯಲ್ಲಂತೂ ಇರಲಿಲ್ಲ. ಆದರೂ ತಾನು ಆಡಲೇ ಬೇಕೆಂದು ನೆಹ್ರಾಜಿ ಎಲ್ಲರಿಗೂ ದಂಬಾಲುಬೀಳಲಾರಂಭಿಸಿದ. ಇದು ಯಾವ ಮಟ್ಟಕ್ಕೆ ಹೋಯಿತೆಂದರೆ ನಾವು ಡರ್ಬನ್‌ನಲ್ಲಿ ಉಳಿದುಕೊಂಡಿದ್ದ ಹೋಟೆಲ್‌ನ ಸಿಬ್ಬಂದಿಯೂ ಕೂಡ ಆಶಿಶ್‌ ನೆಹ್ರಾ ಇಂಗ್ಲೆಂಡ್‌ ವಿರುದ್ಧದ ಪಂದ್ಯವಾಡಲು ಎಷ್ಟು ಕಾತರನಾಗಿದ್ದಾನೆ ಎನ್ನುವುದು ಅರ್ಥಮಾಡಿಕೊಂಡರು!

ಮುಂದಿನ 72 ತಾಸುಗಳಲ್ಲಿ ಅವನು 30-40 ಬಾರಿ ಹಿಮ್ಮಡಕ್ಕೆ ಐಸಿಂಗ್‌ ಮಾಡಿಕೊಂಡ, ಕಾವು ಕೊಟ್ಟುಕೊಂಡ, ಟೇಪ್‌ ಹಚ್ಚಿಸಿಕೊಂಡ, ಪೇನ್‌ ಕಿಲ್ಲರ್‌ಗಳನ್ನು ತಿಂದ. ಪವಾಡ ಸದೃಶವೆಂಬಂತೆ ಆತ ಮೈದಾನಕ್ಕಿಳಿಯಲು ಸಜ್ಜಾಗಿ ನಿಂತುಬಿಟ್ಟ. ಆಶು ಕ್ರಿಕೆಟ್‌ನ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಕ್ಕಿಲ್ಲ ಎಂದು ಹೊರ ಜಗತ್ತು ಭಾವಿಸುತ್ತಿರಬಹುದು, ಆದರೆ ಅವನಿಗೆ ಕ್ರಿಕೆಟ್‌ ಬಗ್ಗೆ ಎಷ್ಟು ವ್ಯಾಮೋಹ ಇತ್ತೆನ್ನುವುದು ನಮಗೆಲ್ಲ ಗೊತ್ತು. ಇಂಗ್ಲೆಂಡ್‌ ವಿರುದ್ಧದ ಆ ಪಂದ್ಯದಲ್ಲಿ ಆಶು ಕೇವಲ 23 ರನ್‌ ಕೊಟ್ಟು 6 ವಿಕೆಟ್‌ ಪಡೆದ! ಇಂಗ್ಲೆಂಡ್‌ ಅನ್ನು ಭಾರತ 82 ರನ್‌ಗಳಿಂದ ಸೋಲಿಸಿತು. 

ನಗುನಗುತ್ತಾ ಮನಗೆದ್ದ ಸೀನಿಯರ್‌

ಆಶು ನಿಜವಾಗಿಯೂ ಒಬ್ಬ ಟೀಮ್‌ ಮ್ಯಾನ್‌. 2011ರ ವಿಶ್ವಕಪ್‌ ಸೆಮಿ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಅದ್ಭುತವಾಗಿ ಬೌಲಿಂಗ್‌ ಮಾಡಿದ. ಆದರೆ ದುರದೃಷ್ಟವಶಾತ್‌ ಗಾಯಗೊಂಡು, ಫೈನಲ್‌ ಮಿಸ್‌ ಮಾಡಿಕೊಂಡ. ಇಂಥ ಪರಿಸ್ಥಿತಿ ಎದುರಾದರೆ ಬಹಳಷ್ಟು ಆಟಗಾರರು ಒಂದೋ ತೀರಾ ಬೇಜಾರು ಮಾಡಿಕೊಳ್ಳುತ್ತಾರೆ ಇಲ್ಲವೇ, ಮೌನಕ್ಕೆ ಶರಣಾಗಿಬಿಡುತ್ತಾರೆ. ಆದರೆ ಅವನು ಮಾತ್ರ ನಗುನಗುತ್ತಾ ಇದ್ದ ಮತ್ತು ಅಗತ್ಯವಿದ್ದವರಿಗೆ ಸಹಾಯ ಮಾಡಲು ಸಿದ್ಧನಿದ್ದ.

ಮುಂಬೈನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಫೈನಲ್ಸ್‌ನಲ್ಲಿ ಆಶು ತಂಡದ ಜೊತೆಗಿದ್ದು ನಮಗೆಲ್ಲ ಡ್ರಿಂಕ್ಸ್‌, ಟವಲ್‌ಗ‌ಳನ್ನು ಅರೇಂಜ್‌ ಮಾಡುತ್ತಿದ್ದ. ಅಗತ್ಯ ಬಿದ್ದಾಗ ಸಲಹೆಗಳನ್ನೂ ನೀಡಿದ. ಹೊರಗಿನವರಿಗೆ ಇವೆಲ್ಲ ಅನಗತ್ಯ ಚಿಕ್ಕ ಪುಟ್ಟ ವಿವರಗಳು ಎನಿಸಬಹುದು, ಆದರೆ ಒಂದು ತಂಡದ ದೃಷ್ಟಿಯಿಂದ ನೋಡಿದಾಗ, ಹಿರಿಯ ಆಟಗಾರ ನೊಬ್ಬ ಹಿಂದೆಮುಂದೆ ನೋಡದೆ ಇಷ್ಟೆಲ್ಲ ಸಹಾಯ ಮಾಡುವುದಿದೆಯಲ್ಲ ಅದು ನಿಜಕ್ಕೂ ಹೃದಯಸ್ಪರ್ಶಿ ಸಂಗತಿ.    

ಆಶಿಶ್‌ ನೆಹ್ರಾಗೆ ದೇವರು ಅದ್ಭುತ ಕುಟುಂಬವನ್ನು ದಯಪಾಲಿಸಿದ್ದಾನೆ. ಇಬ್ಬರು ಮುದ್ದಾದ ಮಕ್ಕಳು ಅವನಿಗಿದ್ದಾರೆ.

ಮಗ ಆರುಶ್‌ ಮತ್ತು ಮಗಳು ಆರೈನಾ. ಆರುಶ್‌ ಕೂಡ ಬೌಲಿಂಗ್‌ ಮಾಡುತ್ತಾನೆ. ಆದರೆ ಅವನ ಬೌಲಿಂಗ್‌ ಶೈಲಿ ಅಪ್ಪನಿಗಿಂತಲೂ ಚೆನ್ನಾಗಿದೆ(ದೇವರಿಗೆ ಧನ್ಯವಾದ..ಹಿಹಿ!) ಇನ್ನು ತನ್ನ ದುರ್ಬಲ ಬ್ಯಾಟಿಂಗ್‌ ಕೌಶಲ್ಯದ‌ ವಿಷಯದಲ್ಲಿ ಆಶು ಮಾತ ನಾಡು ವುದನ್ನು ನೀವು ಕೇಳಬೇಕು! ತನ್ನ ಬ್ಯಾಟಿಂಗ್‌ ಕೌಶಲ್ಯವನ್ನು ಅವನು "ಲೆಜೆಂಡರಿ' ಎಂದು ಬಣ್ಣಿಸುತ್ತಿದ್ದ. ಇದನ್ನು ಕೇಳಿದಾಗಲೆಲ್ಲ ನಾನು ಉರುಳಾಡಿ ನಕ್ಕಿದ್ದೇನೆ. ತಾನೇನಾದರೂ ಬ್ಯಾಟ್ಸ್‌ಮನ್‌ ಆಗಿದ್ದನೆಂದರೆ 45 ವರ್ಷದವರೆಗೆ ಕ್ರಿಕೆಟ್‌ ಆಡುತ್ತಿದ್ದೆ ಎನ್ನುತ್ತಿದ್ದ ಆಶು! 

ಆಶಿಶ್‌ ನೆಹ್ರಾ ಕ್ರಿಕೆಟ್‌ ಬದುಕು ಪಫೆìಕ್ಟ್ ಆಗಿ ಕೊನೆಗೊಳ್ಳಬೇಕು ಎಂದು ಆಶಿಸಿದವರಲ್ಲಿ ನಾನೊಬ್ಬನೇ ಇಲ್ಲ ಎಂದು ನನಗೆ ಗೊತ್ತು. ನಿಜಕ್ಕೂ ನನಗೆ ಇದೊಂದು ಭಾವನಾತ್ಮಕ ಸಮಯ. ಅವನು ಮತ್ತು ಅವನ ಕುಟುಂಬಕ್ಕೂ ಇದು ಎಮೋಷನಲ್‌ ಸಮಯವಾಗಿರಲಿದೆ. ಒಟ್ಟಲ್ಲಿ ನನಗೆ ನಿಜವಾದ ಗೆಳೆಯನನ್ನು ಕೊಟ್ಟ ಈ ಕ್ರಿಕೆಟ್‌ ಜಗತ್ತಿಗೆ ನಾನು ಚಿರಋಣಿ. 

* ಯುವರಾಜ್‌ ಸಿಂಗ್‌, ಕ್ರಿಕೆಟಿಗ

Tags: 
ಆಶಿಶ್‌ ನೆಹ್ರಾ
ಯುವರಾಜ್‌ ಸಿಂಗ್‌
ಕ್ರಿಕೆಟಿಗ
ವಿ.ಐ.ಪಿ.ಕಾಲಂ
ashish nehra
Yuvraj Singh
cricketer
VIP Column
  • NEXT ARTICLE
  • ಮುಖಪುಟ DOWNLOADED

  • ಸುದ್ದಿಗಳು

    • ಸುದ್ದಿಗಳು

    • ರಾಜ್ಯ DOWNLOADED

    • ಓಟಿನ ಬೇಟೆ DOWNLOADED

    • ರಾಷ್ಟ್ರೀಯ DOWNLOADED

    • ಜಗತ್ತು DOWNLOADED

    • ಕ್ರೀಡೆ DOWNLOADED

    • ವಾಣಿಜ್ಯ DOWNLOADED

    • ಹೊರನಾಡು ಕನ್ನಡಿಗ DOWNLOADED

  • ನಿಮ್ಮ ಜಿಲ್ಲೆ

    • ನಿಮ್ಮ ಜಿಲ್ಲೆ

    • ಬೆಂಗಳೂರು ನಗರ DOWNLOADED

    • ಬೆಂಗಳೂರು ಗ್ರಾಮಾಂತರ DOWNLOADED

    • ಬೆಳಗಾವಿ DOWNLOADED

    • ಬಳ್ಳಾರಿ DOWNLOADED

    • ಬೀದರ DOWNLOADED

    • ಬಾಗಲಕೋಟೆ DOWNLOADED

    • ವಿಜಯಪುರ DOWNLOADED

    • ಚಾಮರಾಜನಗರ DOWNLOADED

    • ಚಿಕ್ಕಮಗಳೂರು DOWNLOADED

    • ಚಿಕ್ಕಬಳ್ಳಾಪುರ DOWNLOADED

    • ಚಿತ್ರದುರ್ಗ DOWNLOADED

    • ದಕ್ಷಿಣ ಕನ್ನಡ DOWNLOADED

    • ದಾವಣಗೆರೆ DOWNLOADED

    • ಧಾರವಾಡ DOWNLOADED

    • ಗದಗ DOWNLOADED

    • ಕಲುಬುರಗಿ DOWNLOADED

    • ಹಾಸನ DOWNLOADED

    • ಹಾವೇರಿ DOWNLOADED

    • ಕೊಡಗು DOWNLOADED

    • ಕೊಪ್ಪಳ DOWNLOADED

    • ಕೋಲಾರ DOWNLOADED

    • ಮಂಡ್ಯ DOWNLOADED

    • ಮೈಸೂರು DOWNLOADED

    • ರಾಮನಗರ DOWNLOADED

    • ರಾಯಚೂರು DOWNLOADED

    • ಶಿವಮೊಗ್ಗ DOWNLOADED

    • ತುಮಕೂರು DOWNLOADED

    • ಉಡುಪಿ DOWNLOADED

    • ಉತ್ತರ ಕನ್ನಡ DOWNLOADED

    • ಯಾದಗಿರಿ DOWNLOADED

  • ಸುದಿನ

    • ಸುದಿನ

    • ಸುದಿನ ಆಯ್ಕೆ DOWNLOADED

    • ಪದಾರ್ಥ ಚಿಂತಾಮಣಿ DOWNLOADED

    • ಫ್ಯೂಷನ್ - ಪ್ರವಾಸ - ಮನರಂಜನೆ DOWNLOADED

    • ಯೋಗಕ್ಷೇಮ DOWNLOADED

    • ನಿಮ್ಮ ಊರು-ನಿಮ್ಮ ಧ್ವನಿ DOWNLOADED

    • ಎಜುಗೈಡ್ DOWNLOADED

  • ಕರಾವಳಿ

    • ಕರಾವಳಿ

    • ಮಂಗಳೂರು DOWNLOADED

    • ಪುತ್ತೂರು-ಬೆಳ್ತಂಗಡಿ DOWNLOADED

    • ಉಡುಪಿ DOWNLOADED

    • ಕುಂದಾಪುರ DOWNLOADED

    • ಕಾಸರಗೋಡು-ಮಡಿಕೇರಿ DOWNLOADED

  • ಸಿನೆಮಾ

    • ಸಿನೆಮಾ

    • ಬಾಲ್ಕನಿ-ಸ್ಯಾಂಡಲ್‌ವುಡ್‌ ಸುದ್ದಿ DOWNLOADED

    • ಬಾಲಿವುಡ್‌ ವಾರ್ತೆಗಳು DOWNLOADED

    • ಸಿನೆಪ್ಲೆಕ್ಸ್ -ಚಿತ್ರ ವಿಮರ್ಶೆ DOWNLOADED

    • ಸಂದರ್ಶನಗಳು DOWNLOADED

    • ಚಿತ್ರತಾರೆಗಳು DOWNLOADED

    • ಸಿನಿಮಾ ಗ್ಯಾಲರಿ DOWNLOADED

  • ವೈವಿಧ್ಯ

    • ವೈವಿಧ್ಯ

    • ನಗೆ ಹನಿ DOWNLOADED

    • ಕಿಚನ್ ರೂಂ DOWNLOADED

    • ಆರೋಗ್ಯ DOWNLOADED

    • ಫ್ಯಾಶನ್ DOWNLOADED

    • ಪ್ರವಾಸ DOWNLOADED

  • ಅಂಕಣಗಳು

    • ಅಂಕಣಗಳು

    • ವೆಬ್ ಫೋಕಸ್ DOWNLOADED

    • ನೆಲದ ನಾಡಿ DOWNLOADED

    • ಕಾಸು ಕುಡಿಕೆ DOWNLOADED

    • ಚಕಿತ ಚಿತ್ತ DOWNLOADED

    • ಅಭಿಮತ DOWNLOADED

    • ವಿಐಪಿ ಕಾಲಂ DOWNLOADED

    • ದಾರಿ ದೀಪ DOWNLOADED

    • ಭಾವುಕ ಪ್ರಬುದ್ಧತೆ DOWNLOADED

    • ವಿಶೇಷ DOWNLOADED

    • ರಾಜಾಂಗಣ DOWNLOADED

    • ಮಾಡರ್ನ್ ಆಧ್ಯಾತ್ಮ DOWNLOADED

    • ರಾಜನೀತಿ DOWNLOADED

    • ನೇರಾ ನೇರ DOWNLOADED

    • ನಗರಮುಖಿ DOWNLOADED

  • ಪುರವಣಿಗಳು

    • ಪುರವಣಿಗಳು

    • ಐಸಿರಿ DOWNLOADED

    • ಜೋಶ್ DOWNLOADED

    • ಅವಳು DOWNLOADED

    • ಚಿನ್ನಾರಿ DOWNLOADED

    • ಸುಚಿತ್ರಾ DOWNLOADED

    • ಐ ಲವ್ ಬೆಂಗಳೂರು DOWNLOADED

    • ಬಹುಮುಖಿ DOWNLOADED

    • ಸಾಪ್ತಾಹಿಕ ಸಂಪದ DOWNLOADED

    • ಮಹಿಳಾ ಸಂಪದ DOWNLOADED

    • ಯುವ ಸಂಪದ DOWNLOADED

    • ಆರೋಗ್ಯವಾಣಿ DOWNLOADED

    • ಕಲಾವಿಹಾರ DOWNLOADED

    • ಶಿಕ್ಷಣ ದರ್ಪಣ DOWNLOADED

  • ಜ್ಯೋತಿಷ್ಯ

    • ಜ್ಯೋತಿಷ್ಯ

    • ಇಂದಿನ ಪಂಚಾಂಗ DOWNLOADED

    • ದಿನ ಭವಿಷ್ಯ DOWNLOADED

    • ವಾರ ಭವಿಷ್ಯ DOWNLOADED

    • ವರ್ಷ ಭವಿಷ್ಯ DOWNLOADED

    • ವಾಸ್ತು DOWNLOADED

  • ಗ್ಯಾಲರಿ

    • ಗ್ಯಾಲರಿ

    • ರಾಜ್ಯ DOWNLOADED

    • ರಾಷ್ಟ್ರೀಯ DOWNLOADED

    • ವಿದೇಶ DOWNLOADED

    • ಪ್ರಕೃತಿ DOWNLOADED

    • ವೈವಿಧ್ಯ DOWNLOADED

    • ಸಿನಿಮಾ ಗ್ಯಾಲರಿ DOWNLOADED

    • ಕ್ರೀಡೆ DOWNLOADED

    • ಸುದಿನ DOWNLOADED

  • ವಿಡಿಯೊ DOWNLOADED

  • ePaper

  • Udayavani English Edition